ಶಿರಸಿ –
ಶಿಕ್ಷಕರೊಬ್ಬರ ಮಗನೊರ್ವ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುವ ಚಿತ್ರಣವೊಂದು ಶಿರಸಿ ಯಲ್ಲಿ ಕಂಡು ಬಂದಿದೆ.ಹೌದು ರಾಜ್ಯದಲ್ಲೇ ಉತ್ತಮ ಹೆಸರು ಗಳಿಸಿರುವ ಶಿರಸಿಯಶ್ರೀಮಾರಿಕಾಂಬಾ_ಪ್ರೌಢಶಾಲೆಯ ವಿದ್ಯಾರ್ಥಿ ಚಿರಾಗ್ ೬೨೫ ಕ್ಕೆ ೬೨೫ ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಲ್ಲಿ ಇವರೂ ಕೂಡ ಒಬ್ಬರಾ ಗಿದ್ದಾರೆ
ಮಾರಿಕಾಂಬಾ ಪ್ರೌಢಶಾಲೆಯಲ್ಲಿಯೇ ಶಿಕ್ಷಕರಾಗಿರುವ ಮಹೇಶ ನಾಯ್ಕ ಹಾಗೂ ಹೇಮಾವತಿ ನಾಯ್ಕ ಅವರ ಪುತ್ರ ಚಿರಾಗ್ ಅವರು ಸರ್ಕಾರಿ ಶಾಲೆಯಲ್ಲಿ ಕಲಿತು ರ್ಯಾಂಕ್ ಪಡೆದುಕೊಂಡಿದ್ದಾರೆ.ಇನ್ನು ಇದೇ ಶಾಲೆಯ ದೀಕ್ಷಾ ರಾಜು ನಾಯ್ಕ ಎಂಬ ವಿದ್ಯಾರ್ಥಿನಿ ೬೨೪ ಅಂಕ ಪಡೆದು ರಾಜ್ಯಕ್ಕೆ ಎರಡನೇ ರ್ಯಾಂಕ್ ಪಡೆದುಕೊಂಡಿ ದ್ದಾಳೆ.ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕ ವೃಂದ ಶಿರಸಿಯ ಸಮಗ್ರ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.ಇವರಿಗೆ ಹಾರ್ದಿಕ ಅಭಿನಂದನೆಗಳನ್ಮು ಸಲ್ಲಿಸಿದ್ದಾರೆ