ಉಡುಪಿ –
ಜಿಲ್ಲೆಯಲ್ಲಿ ಡೆಂಗ್ಯೂ ಕಾಟ ಹೆಚ್ಚಾಗಿದ್ದು ಬೈಂದೂರು ತಾಲೂಕು ವ್ಯಾಪ್ತಿಯ ಜಡ್ಕಲ್ ಮುದೂರು ವ್ಯಾಪ್ತಿಯಲ್ಲಿ ಪ್ರಕರಣಗಳ ಸಂಖ್ಯೆ ಮಿತಿ ಮೀರಿದೆ.ಈ ಹಿನ್ನಲೆಯಲ್ಲಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶಾಲೆಗಳಿಗೆ 10 ದಿನ ರಜೆ ಘೋಷಿಸಲಾಗಿದೆ.ಸ್ಥಳೀಯ ಶಾಸಕಸುಕುಮಾರ್ ಶೆಟ್ಟಿ,ಜಿಲ್ಲಾಧಿಕಾರಿ ಕೂರ್ಮರಾಮ್ ಅವರು ಚರ್ಚೆ ನಡೆಸಿದ ಬಳಿಕ ಮೇ 19 ರಿಂದ ಮುಂದಿನ 10 ದಿನಗಳ ಕಾಲ ಜಡ್ಕಲ್ ಮುದೂರು ಭಾಗದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಕ್ರಮವಾಗಿ ಈ ಭಾಗದ ಪ್ರತಿ ಮನೆಗ ಳಿಗೂ ಭೇಟಿ ನೀಡುತ್ತಿರುವ ಆರೋಗ್ಯ ಕಾರ್ಯಕರ್ತರು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಲು ನೈರ್ಮಲ್ಯಕ್ಕೆ ಆದ್ಯತೆ ನೀಡಲು ಸೂಚನೆ ನೀಡುತ್ತಿದ್ದಾರೆ.
ಇನ್ನು ಉಡುಪಿ ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆ ಆರ್ಭಟ ಮುಂದುವರಿದಿದ್ದು ಉಡುಪಿ,ಕುಂದಾಪುರ,ಕಾರ್ಕಳ ತಾಲೂಕಿನಾದ್ಯಂತ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಪರಿಣಾಮ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೆರೆಯ ಆತಂಕ ಕಾಡುತ್ತಿದೆ.ಸ್ಥಳೀಯ ಅಧಿಕಾರಿಗಳು ಅಲರ್ಟ್ ಆಗಿರುವಂತೆ ಜಿಲ್ಲಾಧಿಕಾರಿ ಕೂರ್ಮರಾವ್ ಸೂಚನೆ ನೀಡಿದ್ದಾರೆ.