ಬೆಂಗಳೂರು –
ಮಗನೊಂದಿಗೆ ತಂದೆ,ಮಗಳೊಂದಿಗೆ ತಾಯಿ ಇದು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಿರುವ ವಿಶೇಷ ಫಲಿತಾಂಶದ ಸ್ಟೋರಿ.ಹೌದು ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಹಲವು ವಿಶೇಷ ತೆಗಳಿಗೆ ಸಾಕ್ಷಿಯಾಗಿದೆ.ಮಗಳೊಂದಿಗೆ ಪರೀಕ್ಷೆ ಬರೆದಿದ್ದ ತಾಯಿ ಪಾಸಾಗಿದ್ದಾರೆ.ಅದೇ ರೀತಿ ಮಗನೊಂದಿಗೆ ಪರೀಕ್ಷೆ ಬರೆದಿದ್ದ ತಂದೆ ಪಾಸಾಗಿದ್ದಾರೆ.
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮ ನಹಳ್ಳಿಯಲ್ಲಿ ತಾಯಿ-ಮಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಪಾಸಾಗಿದ್ದಾರೆ.37 ವರ್ಷದ ಸವಿತಾ 2002 -03ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯಾಗಿದ್ದರು. ನಂತರದಲ್ಲಿ ಅವರು ಮದುವೆಯಾದ ಕಾರಣ ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಲಿಲ್ಲ.ಈಗ ಮಗಳು ಚೇತನಾ ಅವರೊಂದಿಗೆ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ತೇರ್ಗಡೆಯಾಗಿದ್ದಾರೆ.ಚೇತನ ಶೇಕಡ 85 ರಷ್ಟು ಅಂಕ ಪಡೆದುಕೊಂಡಿದ್ದು ತಾಯಿ ಸವಿತಾ ಶೇಕಡ 45 ರಷ್ಟು ಅಂಕ ಪಡೆದಿದ್ದಾರೆ.
ಇನ್ನೂ ಇತ್ತ ಮಗನೊಂದಿಗೆ ಕಂಪ್ಲಿ ತಾಲೂಕಿನ ದೇವಲಾಪು ರದಲ್ಲಿ 41 ವರ್ಷದ ಗೌಡ್ರು ಷಣ್ಮುಖಪ್ಪ ಖಾಸಗಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು 307 ಅಂಕಗಳಿಸಿ ಉತ್ತೀರ್ಣರಾಗಿದ್ದಾರೆ.ಅವರ ಮಗ ಭರತ್ 500 ಅಂಕ ಗಳಿಸಿದ್ದಾರೆ.1999ರಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಷಣ್ಮುಖಪ್ಪ 2019 ರಿಂದ 21ರವರೆಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಡಿ ಎಂಸಿ ಅಧ್ಯಕ್ಷರಾ ಗಿದ್ದರು.ಆಗ ಅವರ ಪುತ್ರಿ ಸುಜಾತರೊಂದಿಗೆ 2020 -21 ನೇ ಸಾಲಿನಲ್ಲಿ ಖಾಸಗಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದು ಕನ್ನಡ-ಹಿಂದಿ ವಿಷಯಗಳಲ್ಲಿ ಉತ್ತೀರ್ಣರಾಗಿದ್ದರು ಮತ್ತೆ ಪರೀಕ್ಷೆ ಕಟ್ಟಿದ ಅವರು ಇಂಗ್ಲಿಷ್,ಸಮಾಜ ವಿಷಯ ಗಳಲ್ಲಿ ಉತ್ತೀರ್ಣರಾಗಿದ್ದು ಈ ಬಾರಿ ಪುತ್ರ ಭರತ್ ಅವರೊಂದಿಗೆ ಮತ್ತೆ ಪರೀಕ್ಷೆ ಬರೆದು ಗಣಿತ,ವಿಜ್ಞಾನ ವಿಷಯಗಳಲ್ಲಿ ಪಾಸಾಗುವ ಮೂಲಕ ಎಸ್ ಎಸ್ ಎಲ್ ಸಿ ಪರೀಕ್ಷೆ ಪೂರ್ಣಗೊಳಿಸಿದ್ದಾರೆ.
ವರದಿ – ಎಲ್ ಐ ಲಕ್ಕಮ್ಮನವರ ಶಿಕ್ಷಕರು