ಕೋಲಾರ –
ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ಸರ್ಕಾರಕ್ಕೆ ಬೇಡವಾಯ್ತಾ ಎಂಬ ಪ್ರಶ್ನೆ ಪೋಷಕರನ್ನ ಕಾಡುತ್ತಿದೆ. ಇದಕ್ಕೆ ಕಾರಣ ಇಲ್ಲಿನ ಸರ್ಕಾರಿ ಶಾಲೆಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡದೆ, ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಮಾಡುತ್ತಿರುವ ಆರೋಪ ಕೇಳಿಬರುತ್ತಿದೆ.ಕಳೆದ 5 ದಿನಗ ಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ 10 ಕ್ಕು ಹೆಚ್ಚು ಶಾಲಾ ಕೊಠಡಿಗಳು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗ ಳಿದ್ದು ಅದರಲ್ಲಿ 9 ಸಾವಿರಕ್ಕು ಅಧಿಕ ಕೊಠಡಿಗಳಿದೆ. ಇದರಲ್ಲಿ 3400 ರಕ್ಕು ಹೆಚ್ಚು ಕೊಠಡಿಗಲು ಬಳಕೆ ಮಾಡ ಲಾಗದ ಸ್ತಿತಿಯಲ್ಲಿದೆ ಎಂದು ಅಧಿಕಾರಗಳೇ ಸುದ್ದಿ ಸಂತೆ ಗೆ ಮಾಹಿತಿ ನೀಡಿದ್ದಾರೆ.
2 ವರ್ಷಗಳಿಂದ 500 ಕೊಠಡಿಗಳು ಕುಸಿತ
ಕಳೆದ ಎರಡು ವರ್ಷಗಳಿಂದ 500 ಕೊಠಡಿಗಳು ಕುಸಿದು ಬಿದ್ದಿದ್ದು ಹೊಸದಾಗಿ ಕಟ್ಟಬೇಕಿದೆ.ಇನ್ನು 1500 ಕೊಠಡಿ ಗಳು ಭಾಗಶಃ ಬಳಸಲು ಯೋಗ್ಯವಿಲ್ಲದೆ ದುರಸ್ತಿಯಾಗದೆ ಹಾಗೆ ಉಳಿದಿದೆ, ಇನ್ನು 1400 ಕೊಠಡಿಗಳಲ್ಲಿ ಸಣ್ಣ ಪುಟ್ಟ ರಿಪೇರಿ ಕೆಲಸಗಳು ಆಗಬೇಕಿದೆ ಸರ್ಕಾರಿ ಇಂಜಿನಿಯರ್ ಗಳಿಂದ ಪರಿಶೀಲನೆ ನಡೆಸಿದ ಮಾಹಿತಿಯನ್ನು ಸರ್ಕಾರ ಹಾಗು ಶಿಕ್ಷಣ ಇಲಾಖೆಗೆ ಮನವಿ ನೀಡಲಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.
ದುರಸ್ತಿ ಕಾರ್ಯ ಇನ್ನೂ ನಡೆದಿಲ್ಲ
ಆದರೆ ಈ ವರ್ಷವೂ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಇನ್ನೂ ನಡೆದಿಲ್ಲ ಕೋಲಾರದಲ್ಲಿ ಕಳೆದ ಕಳೆದೊಂದು ವಾರ ದಿಂದ ನಿತ್ಯ ಮಳೆಯಾಗುತ್ತಿದೆ,ದಿನೇ ದಿನೇ ಶಾಲಾ ಕೊಠಡಿ ಸಮಸ್ಯೆಗಳು ಹೆಚ್ಚುತ್ತಲೇ ಇದೆ, ಹಲವೆಡೆ ಶಾಲಾ ಕೊಠಡಿ ಗಳ ಮೇಲ್ಚಾವಣಿ ಬಿರುಕು ಬಿಟ್ಟು ಸಿಮೆಂಟ್ ಪ್ಲಾಸ್ಟಿಂಗ್ ಉದುರಿ ಹೊಗಿದೆ,ಮಳೆಯಾದರೆ ಮೇಲ್ಚಾವಣಿಗಳು ಸೋರುತ್ತಿದೆ.