ಕೋಲಾರ –
ರಾಜ್ಯದಲ್ಲಿ ಸರ್ಕಾರಿ ಶಾಲೆ ಗಳಿಗೆ ವರ್ಷದಿಂದ ವರ್ಷಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ ಹೀಗಾಗಿ ಈ ಒಂದು ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗ ಳನ್ನು ಒದಗಿಸುವುದು ಅವಶ್ಯಕತೆ ಇದೆ.ಹತ್ತಾರು ಯೋಜನೆ ಗಳನ್ನು ನೀಡುವ ಬದಲಿಗೆ ಸೌಲಭ್ಯಗಳನ್ನು ಒದಗಿಸಿದರೆ ಅನುಕೂಲ ಆಗುತ್ತದೆ. ಹೌದು ಇದಕ್ಕೆ ತಾಜಾ ಉದಾಹರಣೆ ಕೋಲಾರ ಜಿಲ್ಲೆಯಲ್ಲಿರುವ ಚಿತ್ರಣ.ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸೋರುವ ಕೊಠಡಿಗಳಲ್ಲೆ ಮಕ್ಕಳು ಮಳೆ ಗಾಳಿ ಲೆಕ್ಕಿಸದೆ ಪಾಠ ಪ್ರವಚನ ಕೇಳುತ್ತಿದ್ದಾರೆ ಮಕ್ಕಳ ಜೀವದ ಜೊತೆಗೆ ಶಿಕ್ಷಣ ಇಲಾಖೆ ಚೆಲ್ಲಾಟ ಆಡ್ತಿದೆ ಯಾ ಎನ್ನುವ ಮಾತುಗಳು ಕೇಳಿಬರ್ತಿದೆ.ಶ್ರೀನಿವಾಸಪುರ, ಹಾಗು ಮುಳಬಾಗಿಲು ತಾಲೂಕಿನಲ್ಲಿ ಹೆಚ್ಚು ಕಡೆ ಶಾಲಾ ಕೊಠಡಿಗಳು ದುರಸ್ತಿಯಾಗಬೇಕಿದ್ದು ಕೇವಲ ಮೇಲಧಿಕಾ ರಿಗಳ ಗಮನಕ್ಕೆ ತರುತ್ತಿರುವ ಕೋಲಾರ ಶಿಕ್ಷಣ ಇಲಾಖೆ ಅಧಿಕಾರಿಗಳು ಹಲವು ಬಾರಿ ಮನವಿ ಮಾಡಿ ಇದೀಗ ಸುಮ್ಮನಾಗಿದ್ದಾರೆ.
ಇನ್ನೂ ಜಿಲ್ಲೆಯಾದ್ಯಂತ ಸುಮಾರು 20 ಶಾಲೆಗಳಲ್ಲಿ ಎಲ್ಲಾ ಕೊಠಡಿಗಳು ಬಳಕೆಗೆ ಯೋಗ್ಯವಿಲ್ಲದ ಕಾರಣ, ಸಮು ದಾಯ ಭವನ,ಸಹಕಾರ ಸಂಘದ ಕಟ್ಟಡ,ಹಾಗೂ ಖಾಸಗಿ ಕಟ್ಟಡದಲ್ಲಿ ಮಕ್ಕಳು ಪಾಠವನ್ನ ಕೇಳ್ತಿದ್ದಾರೆ,ಮೇಲ್ಚಾವಣಿ ಸೋರುವ ಕೊಠಡಿಗಳಲ್ಲಿ ಮುಂದೆ ಏನಾದರು ಅನಾಹುತ ಆದಲ್ಲಿ ಯಾರು ಹೊಣೆ ಎಂಬುದನ್ನ ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತಿಸಬೇಕಿದೆ.