ರಾಮನಗರ –
SSLC ಯ ವಿಜ್ಞಾನ ಪ್ರಶ್ನೆ ಪತ್ರಿಕೆಯನ್ನು ಶಿಕ್ಷಕರೊಬ್ಬರು ಸೋರಿಕೆ ಮಾಡಿದ್ದಾರೆ ಎಂಬ ಆರೋಪದ ಬೆನ್ನಲ್ಲೇ ದೂರು ದಾಖಲಾಗಿದೆ ಹೌದು ಶಿಕ್ಷಕ ರಂಗೇಗೌಡರ ಮೇಲೆ ಈ ಒಂದು ಆರೋಪವು ಕೇಳಿಬಂದ ಘಟನೆ ರಾಮನಗರ ದಲ್ಲಿ ನಡೆದಿದೆ.
ಶಿಕ್ಷಕ ರಂಗೇಗೌಡರಿಂದ ಪೇಪರ್ ಲೀಕ್ ಆಗಿದೆ ಎಂದು ಡಿಡಿಪಿಐ ಅವರು ದೂರನ್ನು ನೀಡಿದ್ದಾರೆ.ಮಾರ್ಚ್ 28 ರಿಂದ 11 ರ ವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆದಿದ್ದು ಈ ವೇಳೆ 11 ರಂದು ವಿಜ್ಞಾನ ಪ್ರಶ್ನೆ ಪತ್ರಿಕೆಯ ಪರೀಕ್ಷೆ ನಡೆದಿತ್ತು.ಪ್ರಶ್ನೆ ಪತ್ರಿಕೆಯನ್ನು ವಿದ್ಯಾರ್ಥಿಗಳಿಗೆ ಕೊಡುವ ಮೊದಲೇ ಸೋರಿಕೆಯಾಗಿತ್ತು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದೂರು ನೀಡಲಾಗಿದೆ.ಮಾಗಡಿಯಲ್ಲಿ ವಿಜ್ಞಾನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.
ಮಾಗಡಿಯ ಹೆಚ್.ಎಂ ಟೌನ್ ಗ್ರೂಪ್ ನಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ.ಕೆಂಪೇಗೌಡ ಪ್ರೌಢಶಾಲೆಯ ಶಿಕ್ಷಕ ರಂಗೇ ಗೌಡ ಎಂಬುವರಿಂದ ಸೋರಿಕೆಯಾಗಿದೆ.ರಂಗೇಗೌಡ ಮೊಬೈಲ್ ನಂಬರ್ ನಿಂದ ವ್ಯಾಟ್ಸಪ್ ಗ್ರೂಪ್ ಗೆ ಇದನ್ನು ಹಾಕಲಾಗಿದೆ.ಈ ಸಂಬಂಧ ಜಿಲ್ಲಾ ಡಿಡಿಪಿಐಗಂಗಣ್ಣಸ್ವಾಮಿ ಅವರು ದೂರನ್ನು ದಾಖಲಿಸಿದ್ದಾರೆ.ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದ್ದು ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.