ವಿಜಯನಗರ –
ಶಾಲೆಯ ಬಿಸಿಯೂಟದಲ್ಲಿ ಬಂತು ಹುಳು ಆಕ್ರೋಶ ಗೊಂಡ ಪೋಷಕರಿಂದ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ಶಿಕ್ಷಕರೊಂದಿಗೆ ಮಾತಿನ ಚಕಮಕಿ ಶಾಲೆಯ ಕೆಲವೊತ್ತು ಗಳ ಕಾಲ ಶಾಲೆಯಲ್ಲಿ ಗೊಂದಲದ ವಾತಾವರಣ

ಹೌದು ಊಟದಲ್ಲೇ ಬಂದ ಹುಳುಗಳು ಇಂಥದೊಂದು ಘಟನೆ ವಿಜಯನಗರ ಜಿಲ್ಲೆಯಲ್ಲಿ ಕಂಡು ಬಂದಿದ್ದು ಎಂದಿನಂತೆ ಇಂದು ಶಾಲೆ ಆರಂಭಗೊಂಡಿತು ಇನ್ನೇನು ಊಟದ ಸಮಯದಲ್ಲಿ ಬಿಸಿಯೂಟ ದಲ್ಲಿ ಮೇಲೆ ಹುಳಗಳು ಕಾಣಿಸಿಕೊಂಡಿದ್ದು ಹೀಗಾಗಿ ಅದನ್ನು ನೋಡಿ ಮಕ್ಕಳು ಶಾಲೆಯ ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ
ಬಿಸಿಯೂಟದಲ್ಲಿ ಹುಳು ಬಂದ ವಿಚಾರ ತಿಳಿದ ಶಿಕ್ಷಕರು ಕೂಡಲೇ ಅದನ್ನು ಊಟ ಮಾಡಿಸದೇ ಹಾಗೇ ಇಟ್ಟರು ಇದರ ಬೆನ್ನಲ್ಲೇ ವಿಚಾರ ತಿಳಿದ ಮಕ್ಕಳ ಪೋಷಕರು ಶಾಲೆಗೆ ಆಗಮಿಸಿ ಶಿಕ್ಷಕರೊಂದಿಗೆ ಮಾತಿನ ಚಕಮಕಿ ಮಾಡಿದರು.ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಘಟನೆ ಕಂಡು ಬಂದಿದೆ.ಪೋಷಕರು ಮತ್ತು ಶಿಕ್ಷಕರ ನಡುವೆ ವಾಗ್ವಾದ ನಡೆಯಿತು.