ಮಂಡ್ಯ –
ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಧೋರಣೆ ಖಂಡಿಸಿ ಮೇ 31ರಂದು ಬೆಂಗಳೂರಿನಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಗೆ ಜನತಾ ಪಕ್ಷವು ಕರೆ ನೀಡಿದೆ ಹೌದು ಪಕ್ಷದ ವತಿಯಿಂದ ಈ ಒಂದು ಹೋರಾಟ ಹಮ್ಮಿಕೊಂಡಿರುವುದಾಗಿ ಮಾಜಿ ಸಚಿವೆ ಜನತಾ ಪಕ್ಷದ ರಾಜ್ಯಾಧ್ಯಕ್ಷೆ ಬಿ.ಟಿ. ಲಲಿತಾ ನಾಯಕ್ ತಿಳಿಸಿದರು.
ಮಂಡ್ಯದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಠ್ಯ ಪರಿಷ್ಕರಣೆ ಬೇಕಾಗಿರಲಿಲ್ಲ.ಒಂದು ಪಕ್ಷದ ಸಂಸ್ಥಾಪ ಕನಾದ ಹೆಡ್ಗೆವಾರ್ ಅವರ ಭಾಷಣವನ್ನು ಪುಸ್ತಕದಲ್ಲಿ ಪ್ರಕಟಿಸಲಾಗಿದೆ.ಉತ್ತಮ ಲೇಖಕರನ್ನು ತೆಗೆದು ಕೆಲಸಕ್ಕೆ ಬಾರದವರ ಲೇಖನಗಳನ್ನು ಸೇರಿಸಲಾಗಿದೆ.ಇದರಿಂದ ಪಠ್ಯ ಹೀನಾಯ ಸ್ಥಿತಿಗೆ ತಲುಪುತ್ತಿದೆ.ಪ್ರಗತಿಪರ,ಜೀವಪರ ಬರಹಗಾರರ ಬರಹಗಳನ್ನು ತೆಗೆದು ಕೋಮುವಾದಿ ಹೆಡ್ಗೆವಾರ್ ಇನ್ನು ಮುಂತಾದವರ ಬರಹಗಳನ್ನು ಸೇರಿಸಿ ಇಡೀ ಪಠ್ಯಪುಸ್ತಕಗಳನ್ನು ‘ಮನುಸ್ಮತಿ’ ಮಾಡಲು ಹೊರಟಿ ದ್ದಾರೆ ಎಂದು ಖಂಡಿಸಿದರು