ಬೆಂಗಳೂರು –
ಕನ್ನಡ ಮಾಧ್ಯಮ ಲೋಕಕ್ಕೆ ಇಂದು ಬರಸಿಡಿಲು ಬಡಿದಂ ತಾಗಿದೆ ಹೌದು ರಾಜ್ಯದಲ್ಲಿ ಇಂದು ಇಬ್ಬರು ಯುವ ಪತ್ರಕರ್ತರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ದಿನ ಪತ್ರಿಕೆಯೊಂದರ ಉಪಸಂಪಾದಕ ಹರೀಶ್ ಹುಲಿಕಟ್ಟೆ (29)ಹಾಗೂ ಖಾಸಗಿ ದಿನ ಪತ್ರಿಕೆಯ ಡಿಸೈನರ್ ಸೂರ್ಯ ಕುಮಾರ್(29) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇಬ್ಬರು ಯುವ ಪತ್ರಕರ್ತರ ನಿಧನಕ್ಕೆ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದ್ದು ಮೃತರ ಕುಟುಂಬಕ್ಕೆ ದುಃಖ ಸಹಿ ಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ ಅಲ್ಲದೇ ರಾಜ್ಯದ ತುಂಬೆಲ್ಲಾ ಸಂತಾಪ ಸೂಚಿಸಿದ್ದಾರೆ.