ಬೆಂಗಳೂರು –
ಕಳೆದ 2-3 ದಿನಗಳಿಂದ ರಾಜ್ಯದ ಪದವೀಧರೆ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸಂಬಂಧಿಸಿ ದಂತೆ ಕಡತ ಸಂಖ್ಯೆ: ಇಪಿ171 ಪಿಬಿಎಸ್ 2022ರ ಅನು ಪಾಲನೆ ಮಾಡಲಾಗಿದ್ದು ಇದಕ್ಕೆ ಆರ್ಥಿಕ ಇಲಾಖೆಯ ಉಪಕಾರ್ಯದರ್ಶಿಗಳು (ಸರ್ವಿಸಸ್-2) ರವರಾದ ಶ್ರೀಮತಿ ಕೆ.ಸಾವಿತ್ರಮ್ಮ ರವರನ್ನು ಭೇಟಿ ಮಾಡಿ ಸಾಧ್ಯವಾ ದಷ್ಟು ಸೇವಾನಿರತ ಪದವೀಧರರಿಗೆ ಶೇಕಡ 40ರಷ್ಟು 6-8ಕ್ಕೆ ಪರಿಗಣಿಸುವ ಕಡತವನ್ನು (ಆರ್ಥಿಕ ಇಲಾಖೆಯಿಂದ ಅನುಮೋದಿಸಿ) ಶಿಕ್ಷಣ ಇಲಾಖೆಗೆ ಕಳುಹಿಸಿಕೊಡುವಂತೆ ಒತ್ತಾಯಿಸಲಾಯಿತು.
ಹಾಗೂ ಇದೇ ಕಡತಕ್ಕೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ವಿಸ್ ರೂಲ್ಸ್ (ಸೇವಾನಿಯಮಗಳ) ಕವಿತಾ ರವರನ್ನು ಸಂಪರ್ಕಿಸಿ ವೃಂದ ಮತ್ತು ನೇಮಕಾತಿ ನಿಯಮಗಳ ಕಡತವನ್ನು ಅನುಮೋದಿ ಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಯಿತು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಯಲ್ಲಿ ಪದವೀಧರ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ಕಡತ ಸಂಖ್ಯೆ: ಇಪಿ171 ಪಿಬಿಎಸ್ 2022 ರಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ವರು ಕೇಳಿರುವ ಕೆಲವು ಸ್ಪಷ್ಟೀಕರಣಗಳನ್ನು ಇಲಾಖೆಗೆ ನೀಡಿರುತ್ತಾರೆ ಹಾಗೂ ಇದೇ ಕಡತಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲಾ ಸ್ಪಷ್ಟೀಕರಣ ನೀಡಿ ದ್ದಾರೆ. ಜೊತೆಗೆ ಸಚಿವ ಸಂಪುಟದಲ್ಲಿ ಅನುಮೋದನೆಗೆ ಸಲ್ಲಿಸಲು ವಿನಂತಿಸಲಾಗಿದೆ.ಈ ಮೇಲಿನ ಎಲ್ಲಾ ಅಂಶಗ ಳನ್ನು ರಾಜ್ಯದ ಸಮಸ್ತ ಶಿಕ್ಷಕರ ಗಮನಕ್ಕೆ ತರುತ್ತಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಪದವೀಧರ ಶಿಕ್ಷಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನವನ್ನು ಮುಂದುವರೆಸಲಾಗುತ್ತದೆಂದು ತಿಳಿಸಬಯಸುತ್ತೇವೆ.ಶಂಭುಲಿಂಗನಗೌಡ ಪಾಟೀಲ
ಅಧ್ಯಕ್ಷರು ಮತ್ತು ಚಂದ್ರಶೇಖರ ನುಗ್ಗಲಿ ಪ್ರಧಾನ ಕಾರ್ಯದರ್ಶಿ ಮತ್ತು ಸರ್ವ ಸದಸ್ಯರು ಸಂಘಟನೆ