ಹುಣಸೂರು –
ಅಕ್ಷರ ದಾಸೋಹ ಹಣವನ್ನು ದುರುಪಯೋಗ ಮಾಡಿ ಕೊಂಡ ಹಿನ್ನಲೆ ಯಲ್ಲಿ ಮುಖ್ಯ ಶಿಕ್ಷಕಿ ಯೊಬ್ಬರನ್ನು ಅಮಾನತು ಮಾಡಲಾಗಿದೆ ಹೌದು ಮೈಸೂರು ತಾಲೂಕಿನ ಹನಗೋಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಹ ಶಿಕ್ಷಕಿ ಎಸ್.ಅಂಜಲಿ ಮಾರೀಸ್ ರನ್ನು ಅಕ್ಷರ ದಾಸೋಹ ಯೋಜನೆಯ 4.42ಲಕ್ಷರೂ ಹಣ ದುರುಪಯೋಗದ ಹಿನ್ನೆಲೆಯಲ್ಲಿ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಅಮಾನತುಗೊಳಿಸಿ ಆದೇಶ ಹೊರಡಿಸಿ ದ್ದಾರೆ.
ಎಸ್.ಅಂಜಲಿ ಮಾರಿಸ್‌ರವರು ಈ ಹಿಂದೆ ಹನಗೋಡು ಶಾಲೆಯಲ್ಲಿ ಪ್ರಭಾರಿ ಮುಖ್ಯ ಶಿಕ್ಷಕರಾಗಿದ್ದ ವೇಳೆ ಮಕ್ಕಳ ಅಕ್ಷರ ದಾಸೋಹ-ಬಿಸಿಯೂಟ ಯೋಜನೆಯಡಿ ಹಂತ ಹಂತವಾಗಿ 4,42,483 ರೂಗಳು ದುರುಪಯೋಗಪಡಿಸಿ ಕೊಂಡಿರುವುದು ಅಕ್ಷರ ದಾಸೋಹದ ಶಿಕ್ಷಣಾಧಿಕಾರಿಗಳ ತನಿಖೆಯಿಂದ ಬೆಳಕಿಗೆ ಬಂದಿದ್ದು ಅವರ ವರದಿ ಆದಾರದ ಮೇಲೆ ಶಿಕ್ಷಣ ಇಲಾಖೆ ಕಾರಣ ಕೇಳಿ ನೀಡಿದ್ದ ನೋಟಿಸ್‌ಗೆ ಶಿಕ್ಷಕಿ ಅಂಜಲಿ ಮಾರಿಸ್‌ರವರು ದುರುಪಯೋಗಪಡಿಸಿ ಕೊಂಡಿರುವ ಹಣವನ್ನು ಶಾಲೆಯ ಅಕ್ಷರ ದಾಸೋಹ ಖಾತೆಗೆ ಹಣವನ್ನು ಜಮೆ ಮಾಡಲು ಒಪ್ಪಿ ತಪ್ಪೊಪ್ಪಿಗೆ ಪತ್ರವನ್ನು ಸಲ್ಲಿಸಿರುವ ಪರಿಣಾಮ ನಿಮ್ಮ ಮೇಲಿನ ಆರೋಪ ಸಾಬೀತಾಗಿರುತ್ತದೆ ಇದರಿಂದಾಗಿ ನೀವು ಪ್ರಭಾರ ವಹಿಸಿಕೊಂಡಿದ್ದ ಅವಧಿಯ ಶಾಲೆಯಲ್ಲಿನ ಅವ್ಯ ವಹಾರಗಳ ಬಗ್ಗೆ ವಿಚಾರಣೆ ನಡೆಸಲು ತೀರ್ಮಾನಿಸಿ,ಶಿಸ್ತು ಕ್ರಮವಹಿಸಲು ತೀರ್ಮಾನಿಸಿದೆ.
ನಿಮ್ಮ ವರ್ತನೆಯಿಂದಾಗಿ ಸಾರ್ವಜನಿಕರು ಇಲಾಖೆಯನ್ನು ಹಾಗೂ ಶಿಕ್ಷಕರನ್ನು ಅನುಮಾನದಿಂದ ನೋಡುವಂತಾ ಗಿದ್ದು ಬಿಸಿಯೂಟದ ಹಣ ದುರುಪಯೋಗವನ್ನು ಗಂಭೀ ರವಾಗಿ ಪರಿಗಣಿಸಿ,ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ ಎಂದು ಡಿಡಿಪಿಐ ತಿಳಿಸಿದ್ದಾರೆ.