ಮೈಸೂರು –
ಮೈಸೂರು ತಾಲೂಕಿನ ಹನಗೋಡು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಸಹ ಶಿಕ್ಷಕಿ ಎಸ್.ಅಂಜಲಿ ಮಾರೀಸ್ ಅವರ ಮತ್ತೊಂದು ಅವ್ಯವ ಹಾರ ಬಯಲಾಗಿದೆ ಹೌದು ಅಕ್ಷರ ದಾಸೋಹ ಯೋಜನೆ ಯಲ್ಲಿ 4.42ಲಕ್ಷರೂ ಹಣ ದುರುಪಯೋಗದ ಬೆನ್ನಲ್ಲೇ ಈಗ ಇವರನ್ನು ಈಗಾಗಲೇ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಅಮಾನತುಗೊಳಿಸಿ ಆದೇಶ ಹೊರಡಿಸಿ ದ್ದಾರೆ.
ವರ್ಷದ ಹಿಂದಷ್ಟೆ ಕಾಯಂ ಮುಖ್ಯ ಶಿಕ್ಷಕಿಯಾಗಿ ಪ್ರಭಾ ಮಣಿ ಅಧಿಕಾರವಹಿಸಿಕೊಂಡಿದ್ದರು.ಅಕ್ಷರ ದಾಸೋಹ ಯೋಜನೆಯ ಖಾತೆಯಲ್ಲಿ ಹಣ ಬಹಳ ಕಡಿಮೆಯಿರುವು ದನ್ನು ಕಂಡು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ಧೇಶಕರಿಗೆ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದರು.ಎಲ್ಲಾ ಪ್ರೌಢಶಾಲೆಯ ಖಾತೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಹಣವಿತ್ತು.ಇಲ್ಲಿ ಹಣವಿಲ್ಲದ ಬಗ್ಗೆ ಅನು ಮಾನಗೊಂಡು ಜಿಲ್ಲಾ ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಲಿಂಗರಾಜಯ್ಯನವರೇ ಶಾಲೆಗೆ ಬಂದು ತಪಾಸಣೆ ನಡೆಸಿದ ವೇಳೆ ಹಣ ದುರುಪಯೋಗದ ಪ್ರಕರಣ ಬಯಲಿಗೆ ಬಂದಿದೆ.
ಜಚಅಂಜಲಿ ಮಾರೀಸ್‌ರವರು ಪ್ರಭಾರಿ ಮುಖ್ಯ ಶಿಕ್ಷಕಿ ಯಾಗಿದ್ದ ವೇಳೆ ಬಿಸಿಯೂಟ ಹಣ ದುರುಪಯೋಗದ ಜೊತೆಗೆ ಪಿಠೋಪಕರಣಗಳಿಗಾಗಿ ಶಾಲಾ ಮಕ್ಕಳಿಂದ ವಸೂಲಿ ಮಾಡಿದ್ದ ೪೮ ಸಾವಿರ ರೂಗಳನ್ನು ಶಾಲಾ ಖಾತೆಗೆ ಜಮೆ ಮಾಡದೆ ಪೀಠೋಪಕರಣವನ್ನು ಮಾಡಿಸದೆ ತಮ್ಮ ಬಳಿಯೇ ಹಣವಿಟ್ಟುಕೊಂಡು ದುರುಪಯೋಗಪಡಿ ಸಿಕೊಂಡ ಪಡಿಸಿಕೊಂಡಿದ್ದು ಸಹ ತನಿಖೆ ವೇಳೆ ಪೋಷ ಕರು ಅಧಿಕಾರಿಗಳಿಗೆ ದೂರಿದ್ದರು.ಮಾರನೇ ದಿನವೇ ಈ ಹಣವನ್ನು ಖಾತೆಗೆ ಜಮೆ ಮಾಡಿದ್ದರಾದರೂ ಅಕ್ಷರ ದಾಸೋಹದ ಹಣ ಮಾತ್ರ ಪಾವತಿಸಿರಲಿಲ್ಲ ತನಿಖೆ ವೇಳೆ ಸಮರ್ಪಕ ಉತ್ತರ ನೀಡಿರಲಿಲ್ಲ.