ಬೆಂಗಳೂರು –
ನಮ್ಮ ಜಿಲ್ಲೆಯೊಳಗೇ ನಮಗೆ ವರ್ಗಾವಣೆ ಕೊಡಿ ಎಂದು ಪ್ರತಿಭಟಿಸುವ ಮೂಲಕ ಸರಕಾರದ ವಿರುದ್ಧ ಸೆಟೆದು ನಿಂತಿದ್ದಾರೆ ಪೊಲೀಸರು
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯಿದೆ 2020ಕ್ಕೆ ತಿದ್ದುಪಡಿಯನ್ನು ಮಾಡಲಾಗಿದ್ದು ಶಿಕ್ಷಕರಿಗೆ ಅವರ ತವರು ಜಿಲ್ಲೆಗಳಿಗೆ ವರ್ಗಾವಣೆಗೆ ಒಂದು ಬಾರಿ ಆಯ್ಕೆಯನ್ನು ನೀಡಲಾಗಿದೆ.
ಹುದ್ದೆಗಳ ಕೊರತೆಯ ನೆಪವೊಡ್ಡಿ ಸರಕಾರ ತಮ್ಮ ವರ್ಗಾವಣೆಗೆ ನಿರಾಕರಿಸುತ್ತಿದೆ ಎಂದು ಪ್ರತಿಭಟನೆಯನ್ನು ಆರಂಭಿಸಿದ್ದೇವೆ.ನಮ್ಮ ಜಿಲ್ಲೆಗಳಲ್ಲಿ ಅಥವಾ ನಮ್ಮ ಜಿಲ್ಲೆ ಗಳಿಗೆ ಹತ್ತಿರವಿರುವ ಜಿಲ್ಲೆಗಳಲ್ಲಿ ನಮಗೆ ಹುದ್ದೆ ಕೊಟ್ಟರೆ ನಮ್ಮ ಕುಟುಂಬದವರನ್ನು ನೋಡಲು ಸಹಕಾರಿಯಾಗು ತ್ತದೆ ಇದಕ್ಕಾಗಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾ ನಿರತ ಶಿಕ್ಷಕಿಯೊಬ್ಬರು ಹೇಳಿದ್ದಾರೆ.
ನಾವು ನಮ್ಮ ಮಕ್ಕಳು ಮತ್ತು ಕುಟುಂಬಗಳನ್ನು ಭೇಟಿ ಮಾಡಲು ನಮ್ಮ ಜಿಲ್ಲೆಯೊಳಗಿದ್ದರೆ ಅನುಕೂಲವಾಗುತ್ತದೆ ವಿಶೇಷವಾಗಿ ನಮ್ಮ ಕುಟುಂಬದಿಂದ ದೂರವಿರುವ ಚಿಕ್ಕ ಮಕ್ಕಳಿರುವ ನಮ್ಮಂತಹವರಿಗೆ ಅವರನ್ನು ನೋಡಿಕೊ ಳ್ಳಲು ಜನ ಸಿಗುವುದಿಲ್ಲ ಎಂದು ಶಿಕ್ಷಕಿಯೊಬ್ಬರು ಹೇಳಿ ಕೊಂಡರೆ ಇನ್ನು ಕೆಲವರು ವಿಚ್ಛೇದನದ ಕಾರಣವನ್ನೂ ಸಹ ನೀಡಿದರು