ಚಿಕ್ಕಬಳ್ಳಾಪುರ –
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕೊರೊನಾ ದಿಂದ ಶೀಘ್ರ ಗುಣಮುಖರಾಗಲಿ ಎಂದು ಚಿಕ್ಕಬಳ್ಳಾಪುರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಪಾರ ಅಭಿಮಾನಿಗಳು ವಿಶೇಷ ಪೂಜೆಹಾಗೂ ಗಂಗಮ್ಮ ದೇವಿಗೆ ತೆಂಗಿನಕಾಯಿ ಅರ್ಪಿಸುವ ಕಾರ್ಯಕ್ರಮ ನಡೆಸಿ ದರು.ಶ್ರೀಜಾಲರಿ ಗಂಗಮ್ಮ ದೇವರಿಗೆ ಕಾರ್ಯಕರ್ತರು ಹಾಗೂ ಸಚಿವ ಡಾ.ಕೆ.ಸುಧಾಕರ್ ಅಭಿಮಾನಿಗಳು ರಾಜ್ಯ ದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಹಗಲಿರುಳು ಶ್ರಮಿಸಿದ ತಮ್ಮ ನೆಚ್ಚಿನ ಸಚಿವರಿಗೆ ಕೊರೊನಾ ಕಾಣಿಸಿ ಕೊಂಡಿದ್ದು ಅವರು ಬೇಗ ಗುಣಮುಖರಾಗಲಿ ಎಂದು ವಿಶೇಷ ಪೂಜೆಸಲ್ಲಿಸಿದರು.ಜೊತೆಗೆ ಗಂಗಮ್ಮ ದೇವಿಗೆ ತೆಂಗಿನಕಾಯಿ ಅರ್ಪಿಸಿದರು.ಸಚಿವರ ಆರೋಗ್ಯಕ್ಕಾಗಿ ಬೇಡಿಕೊಂಡರು.
ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್,ನಗರಸಭಾ ಅಧ್ಯಕ್ಷ ಡಿ.ಎಸ್. ಆನಂದ್‌ರೆಡ್ಡಿ(ಬಾಬು) ಮಾಜಿ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ,ನಗರಸಭಾ ಸದಸ್ಯ ಗಜೇಂದ್ರ,ಬಿಜೆಪಿ ನಗರ ಉಪಾಧ್ಯಕ್ಷ ಆನಂದ್ ಮತ್ತಿತರರು ಹಾಜರಿದ್ದರು.