ಕೊಟ್ಟೂರು (ವಿಜಯನಗರ) –
ಪಿಎಸ್ಐ ವಿಜಯಕೃಷ್ಣ ಜತೆ ಪೇದೆಯೊಬ್ಬರು ಅನುಚಿತ ವಾಗಿ ವರ್ತಿಸಿದ ಆರೋಪದ ಮೇಲೆ ಪೇದೆ ಯೊಬ್ಬರು ಅಮಾನತುಗೊಂಡ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಐವರು ಪೇದೆಗಳ ತಲೆ ದಂಡವಾಗಿದೆ.ಮೇ 14ರಂದು ಠಾಣೆಯಲ್ಲಿ ಠಾಣಾಧಿಕಾರಿ ಬ್ರೀಫಿಂಗ್ ಸಭೆ ನಡೆಸಿದ ಬಳಿಕ ಸಿಬ್ಬಂದಿಗೆ ಬೀಟ್ ಹಂಚಿಕೆ ಮಾಡಿದ್ದರು.ಇದನ್ನು ಆಕ್ಷೇಪಿಸಿದ್ದ ಪೇದೆ ಕೊಟ್ರಗೌಡ ಪಿಎಸ್ಐ ಜತೆ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿದ್ದಲ್ಲದೆ ಬೆದರಿಕೆ ಹಾಕಿದ್ದರು. ಹಾಗಾಗಿ ಕೊಟ್ರಗೌಡ ರನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು.ಇದೀಗ ಇದೇ ಪ್ರಕರಣ ಸಂಬಂಧ ಕೊಟ್ಟೂರು ಪೊಲೀಸ್ ಠಾಣೆ ಪೇದೆಗಳಾದ ಕುಮಾರ ಪತ್ರಿ ಬಸವರಾಜು,ಕವಿತಾಬಾಯಿ, ತಿಪ್ಪಣ್ಣ ಹಾಗೂ ಹ್ಯಾಟಿ ಬಸವರಾಜ ಅವರನ್ನೂ ಅಮಾ ನತು ಮಾಡಲಾಗಿದೆ.
ಪಿಎಸ್ಐ ಜತೆ ಕೊಟ್ರಗೌಡ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿದ್ದ ಪ್ರಕರಣ ಸಂಬಂಧ ನಡೆದ ಇಲಾಖಾ ವಿಚಾರಣೆ ಯಲ್ಲಿ ಘಟನೆ ವೇಳೆ ಹಾಜರಿದ್ದ ಪೇದೆಗಳು ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದರು ಎಂಬುದು ಠಾಣೆಯ ಸಿಸಿಟಿವಿ ದೃಶ್ಯಾವಳಿಯಿಂದ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆಯಲ್ಲಿ ಸುಳ್ಳು ಸಾಕ್ಷಿ ನುಡಿದು ಅಶಿಸ್ತು ತೋರಿ ದ್ದಾರೆ ಎಂದು ಪರಿಗಣಿಸಿ ಐವರನ್ನು ಅಮಾನತುಗೊಳಿಸಿ ಎಸ್ಪಿ ಡಾ.ಅರುಣ್ ಕೆ. ಆದೇಶ ಹೊರಡಿಸಿದ್ದಾರೆ.