ಬೆಂಗಳೂರು –
ರೋಹಿತ್ ಚಕ್ರತೀರ್ಥ ಸಮಿತಿಯು ಪಠ್ಯ ಪರಿಷ್ಕರಣೆ ವೇಳೆ ಕೈ ಬಿಟ್ಟಿದ್ದ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ಶಿಲ್ಪಿ ಬಿರುದನ್ನು ಮತ್ತೆ ಸೇರಿಸಿ 9 ನೇ ತರಗತಿ ಸಮಾಜ ವಿಜ್ಞಾನ ನಮ್ಮ ಸಂವಿಧಾನ ಅಧ್ಯಾಯವನ್ನು ಪ್ರತ್ಯೇಕವಾಗಿ ಮುದ್ರಿಸಿ ಶಾಲೆಗಳಿಗೆ ಪೂರೈಸಲು ಶಿಕ್ಷಣ ಇಲಾಖೆ ಮುಂದಾಗಿದೆ
9 ನೇ ತರಗತಿಯ ನಮ್ಮ ಸಂವಿಧಾನ ಅಧ್ಯಾಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗಿದ್ದ ಸಂವಿಧಾನ ಶಿಲ್ಪಿ ಬಿರುದನ್ನು ಕೈಬಿಡಲಾಗಿತ್ತು.ಈ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸಂವಿಧಾನ,ಅಂಬೇಡ್ಕರ್ ವಿಚಾರಗಳಿಗೆ ಸಂಬಂಧಿಸಿದಂತೆ ತಪ್ಪುಗಳಿದ್ದರೆ ಅವುಗ ಳನ್ನು ಸರಿಪಡಿಸಿ ನಮ್ಮ ಸಂವಿಧಾನ ಅಧ್ಯಾಯವನ್ನು ಹೊಸದಾಗಿ ಮುದ್ರಿಸಲು ಸೂಚಿಸಿದ್ದಾರೆ.