ಸಂತೇಮರಹಳ್ಳಿ –
ಏಪ್ರಿಲ್ 11ರಂದು ರಾತ್ರಿ ಸಂತೇಮರಹಳ್ಳಿಯ ಚಾಮರಾ ಜನಗರ ಹೆದ್ದಾರಿಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮೈಸೂರಿನಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದ ಠಾಣೆಯ ಎಎಸ್‌ಐ ಆಗಿದ್ದ ರಾಜು ನಿಧನರಾಗಿ ದ್ದಾರೆ.ಗಸ್ತು ತಿರುಗುವುದಕ್ಕಾಗಿ ಸಮೀಪದ ಕೆಂಪನಪುರ ಗ್ರಾಮಕ್ಕೆ ರಾಜು ಅವರು ರಾತ್ರಿ 10.30ರ ಸುಮಾರಿಗೆ ಕಾನ್‌ಸ್ಟೆಬಲ್ ಪ್ರಸಾದ್ ಅವರನ್ನು ಬೈಕ್‌ನಲ್ಲಿ ಕೂರಿಸಿ ಕೊಂಡು ಹೋಗುತ್ತಿದ್ದರು.ಹುಲ್ಲೇಪುರ ಕ್ರಾಸ್ ಬಳಿ ಹಿಂದಿ ನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪ್ರಸಾದ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.ರಾಜು ಅವರಿಗೂ ಗಂಭೀರ ಗಾಯಗಳಾಗಿತ್ತು.ಹೆಚ್ಚಿನ ಚಿಕಿತ್ಸೆಗಾಗಿ ಮೈಸೂ ರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು.ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.
ಚಾಮರಾಜನಗರ ತಾಲ್ಲೂಕಿನ ಕೋಡಿಉಗನೆ ಗ್ರಾಮದವ ರಾದ ರಾಜು ಅವರಿಗೆ ಪತ್ನಿ,ಮಗ,ಮಗಳು ಇದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರ್‌ರಾಜು, ಡಿವೈ ಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ಕೋಡಿ ಉಗನೆಗೆ ತೆರಳಿ ರಾಜು ಅವರಿಗೆ ಅಂತಿಮ ನಮನ ಸಲ್ಲಿಸಿದರು.ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು.