ಮೈಸೂರು –
ಮೈಸೂರಿನ ಹೊಸದೊಡ್ಡಿ ಶಾಲೆ ಎಂದು ಬದಲಿಸಬೇ ಕೆಂದು ಒಂದು ಬಣ ಒತ್ತಾಯಿಸುತ್ತಿದ್ದು ಮತ್ತೊಂದು ಬಣ ಮೈಸೂರಪ್ಪನ ದೊಡ್ಡಿ ಎಂತಲೇ ಇರಬೇಕು ಎಂದು ಪಟ್ಟು ಹಿಡಿದಿದೆ.ಹೌದು 40 ವರ್ಷಗಳಿಂದ ಇರುವ ಹೆಸರನ್ನು ಬದಲಿಸಿದರೇ ಕೋರ್ಟ್ ಗೆ ಹೋಗುತ್ತೇವೆಂದುಮತ್ತೊಂದು ಬಣ ಎಚ್ಚರಿಸಿರುವುದು ಹನೂರು ಬಿಇಒ ಅವರಿಗೆ ತಲೆ ನೋವಾಗಿ ಪರಿಣಮಿಸಿದೆ.ಮೈಸೂರಪ್ಪನದೊಡ್ಡಿ ಎಂಬ ಹೆಸರಿನ ಮುಂದೆ ಬ್ರಾಕೆಟ್ ನಲ್ಲಿ ಹೊಸದೊಡ್ಡಿ ಎಂದು ನಮೂದಿಸಲಾಗುವುದು ಎಂದು ಶಿಕ್ಷಣ ಇಲಾಖೆ ಹೇಳುತ್ತಿ ದ್ದರೂ ಒಂದು ಬಣ ಒಪ್ಪದೇ ಮಕ್ಕಳನ್ನು ಶಾಲೆಗೆ ಕಳುಹಿ ಸಿಲ್ಲ ಕೆಲವರು ಬೇರೆ ಶಾಲೆಗೆ ಸೇರಿಸಲು ಮುಂದಾಗಿದ್ದು ಈ ನೇಮ್ ಪಾಲಿಟಿಕ್ಸ್ ಪ್ರತಿಷ್ಟೆಯಾಗಿ ಬದಲಾಗಿದೆ.
ಈ ಸಂಬಂಧ ಹನೂರು ಬಿಇಒ ಸ್ವಾಮಿ ಪ್ರತಿಕ್ರಿಯಿಸಿ ಕಳೆದ ಒಂದು ವಾರದಿಂದಲೂ ಮನವೊಲಿಸಿದರೂ ಯಾವುದೇ ಫಲ ಕಂಡಿಲ್ಲ ಇದೇ ರೀತಿ 3-4 ದಿನ ಮುಂದುವರೆದರೇ ಮಕ್ಕಳ ಆಯೋಗಕ್ಕೆ ಪತ್ರ ಬರೆಯಲಾಗುವುದು ಏಕಾಏಕಿ ಶಾಲೆ ಹೆಸರನ್ನು ಬದಲಿಸಲು ಸಾಧ್ಯವಿಲ್ಲ ಎಂದು ಅಸಹಾ ಯಕತೆ ತೋಡಿಕೊಂಡಿದ್ದಾರೆ.