ಬೆಂಗಳೂರು –
ರಾಜ್ಯದ KSPSTA ಸಂಘಟನೆ ರಾಜ್ಯದ ಶಿಕ್ಷಕರಿಗೆ ಮತ್ತೊಂದು ಮಹತ್ವದ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸವನ್ನು ಮಾಡಿದೆ ಹೌದು ರಾಜ್ಯದ ಶಿಕ್ಷಕರಿಗೆ ಪ್ರತಿ ತಿಂಗಳು ವೇತನದ ಸಮಗ್ರ ಮಾಹಿತಿಯನ್ನು ತಿಳಿದು ಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದ ತಲೆನೋವಿನ ಕೆಲಸ ವಾಗಿದ್ದ ವೇತನದ Pay Slip ನ್ನು ಉಚಿತವಾಗಿ ಅವರಿಗೆ ಒದಗಿಸುವ ನಿಟ್ಟಿನಲ್ಲಿ ಈಗ ದಿಟ್ಟ ಹೆಜ್ಜೆ ಇಟ್ಟಿದ್ದು ಹೀಗಾಗಿ ಇದನ್ನು ಈಗ ನೀಡಲಾಗುತ್ತಿದೆ.

ಇದಕ್ಕಾಗಿ ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶಿಕ್ಷಕರು ಹಣವನ್ನು ವ್ಯರ್ಥ ಮಾಡುತ್ತಿದ್ದು ಇದನ್ನೆಲ್ಲಾ ವನ್ನು ತಿಳಿದು ಕೊಂಡು ಈಗ ಸಂಘಟನೆಯ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ್ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿದಂತೆ ಸಂಘಟನೆಯ ಸರ್ವ ಸದಸ್ಯರು ಇಲಾಖೆಗೆ ಒತ್ತಡ ಹಾಕಿ ಈಗ ಹೊಸ ವ್ಯವಸ್ಥೆ ಯನ್ನು ಜಾರಿಗೆ ಮಾಡಿಸಿ ಶಿಕ್ಷಕರ ಪರವಾಗಿ ಮತ್ತೊಂದು ಮಹತ್ವದ ಕಾರ್ಯವನ್ನು ಮಾಡಿದ್ದಾರೆ.