ವಿಜಯಪುರ –
ಬಿಸಿಯೂಟದ ಅಕ್ಕಿ ಕದ್ದೊಯ್ಯಲು ಯತ್ನಿಸಿದ ಆರೋಪದ ಮೇಲೆ ಸಿಂದಗಿ ತಾಲೂಕಿನ ಬೊಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕನನ್ನು ಅಮಾನತು ಗೊಳಿಸಲಾಗಿದೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಂ. ಹರನಾಳ ಆದೇಶ ಹೊರಡಿಸಿದ್ದಾರೆ.ಶಾಲೆಯ ಅಡುಗೆ ಕೋಣೆಯಲ್ಲಿ 50 ಅಕ್ಕಿ ಚೀಲವನ್ನು ಮುಖ್ಯ ಶಿಕ್ಷಕ ಶರಣಪ್ಪ ಬಿದನೂರ ವಾಹನ ದಲ್ಲಿ ಸಾಗಿಸುವಾಗ ಗ್ರಾಮಸ್ಥರು ತಡೆದಿದ್ದರು.ಇದರಿಂದ ಗಾಬರಿಗೊಂಡ ಮುಖ್ಯ ಶಿಕ್ಷಕ ಹಾಗೂ ವಾಹನ ಚಾಲಕ ಪರಾರಿಯಾಗಿದ್ದರು.ತಕ್ಷಣ ಮುಖ್ಯ ಶಿಕ್ಷಕನನ್ನು ಅಮಾನತು ಗೊಳಿಸಬೇಕೆಂದು ಒತ್ತಾಯಿಸಿ ಶಾಲೆ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು ಈ ಒಂದು ಕುರಿತು ನಿಮ್ಮ ಸುದ್ದಿ ಸಂತೆ ಕೂಡಾ ವರದಿಯೊಂದನ್ನು ಪ್ರಕಟಿಸಿತು ಇದರಿಂದ ಎಚ್ಚೇತ್ತುಕೊಂಡ ಬಿಇಓ ಅಮಾನತು ಮಾಡಿ ಆದೇಶವನ್ನು ಮಾಡಿದ್ದಾರೆ
ನಂತರ ಸ್ಥಳಕ್ಕೆ ಶಿಕ್ಷಣ ಇಲಾಖೆ ಹಾಗೂ ಬಿಸಿಯೂಟ ಮೇಲ್ವಿಚಾರಕರ ನಿರ್ವಹಣಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು.ಈ ವೇಳೆ ಸದ್ಯ ಮುಖ್ಯ ಶಿಕ್ಷಕ ಪರಾರಿ ಯಾಗಿದ್ದು ಅವರು ಕರ್ತವ್ಯಕ್ಕೆ ಹಾಜರಾದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು.ಅದರಂತೆ ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆ ಹಾಗೂ ತರಗತಿ ನಡೆಸದೇ ಲೋಪ ಎಸಗಿದ್ದಾರೆ ಎಂದು ಮುಖ್ಯ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಮಾನತು ಗೊಳಿಸಿದ್ದಾರೆ.
.