ಬೆಳ್ತಂಗಡಿ –
ಹೃದಯಾಘಾತದಿಂದ ಶಿಕ್ಷಕಿ ಯೊಬ್ಬರು ಮೃತರಾಗಿದ್ದಾರೆ ಹೌದು ಕಳೆಂಜ ಗ್ರಾಮದ ಉದ್ರಾಜೆ ನಿವಾಸಿ, ಮೇಲಂತ ಬೆಟ್ಟು ಕಾಲೇಜಿನ ಉಪನ್ಯಾಸಕ ಡಾ ಕುಶಾಲಪ್ಪ ಎಸ್. ಅವರ ಪತ್ನಿ ಭಾರತಿ ಎಸ್.(42) ಹೃದಯಾಘಾತದಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದ ಅವರು ಹೃದಯಾಘಾತಕ್ಕೊಳಗಾಗಿದ್ದರು.ತತ್‌ಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಅಷ್ಟರಲ್ಲಿ ಅವರು ಮೃತಪಟ್ಟರು.ಭಾರತಿ ಅವರು ಕಳೆದ 8 ವರ್ಷಗ ಳಿಂದ ಕಾಯರ್ತಡ್ಕದ ದಿವ್ಯಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.ಅವರು ಪತಿ,ಪುತ್ರ, ಪುತ್ರಿಯನ್ನು ಅಗಲಿದ್ದಾರೆ ಇನ್ನೂ ಇವರ ನಿಧನಕ್ಕೆ ರಾಜ್ಯದ ಶಿಕ್ಷಕ ಬಂಧುಗಳು ಭಾವಪೂರ್ಣ ನಮನ ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.