ಕಲಬುರಗಿ –
ಶಾಲಾ ಶಿಕ್ಷಕರ ಸಂಬಳ ಬಿಡುಗಡೆ ಮಾಡುವ ವಿಚಾರ ಕುರಿತು ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದ ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್ ಎಸ್ ದೇಶಮುಖ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದ ಬಿಇಓ ಅವರನ್ನು ಸಮಗ್ರ ವಿಚಾರಣೆ ಮಾಡಿದ ನಂತರ ನ್ಯಾಯಾಧೀಶರು ಇವರನ್ನು ಜೈಲಿನ ದಾರಿ ತೋರಿಸಿದ್ದಾರೆ
ಎಚ್.ಎಸ್ ದೇಶಮುಖ್ ಅಫಜಲಪುರ ತಾಲೂಕಿನ ದೇವಲ್ ಗಾಣಗಾಪುರ ಗ್ರಾಮದ ತಿಪ್ಪಣ್ಣ ಕಂಟೆಪ್ಪ ಅನುದಾನಿತ ಶಾಲೆಗೆ ಸಂಬಳ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಅಫಜಲಪುರದಿಂದ ಕಲಬುರಗಿಯ ಹೊಟೇಲ್ ಬಳಿ 15 ಸಾವಿರ ಹಣ ಪಡೆಯುವಾಗ ಎಸಿಬಿ ದಾಳಿ ನಡೆದಿತ್ತು.ಆರೋಪಿಯನ್ನು ವಶಕ್ಕೆ ಪಡೆದಿದ್ದ ಎಸಿಬಿ ಅಧಿಕಾರಿ ಗಳು ಸಧ್ಯ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಜೈಲಿಗೆ ಕಳಿಸಿದ್ದಾರೆ.