ಬೆಂಗಳೂರು –
ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ಮೇಲೆ ಬಹುತ್ವ ಕರ್ನಾಟಕ ಸಂಘಟನೆ ಯೊಂದು ಗಂಭೀರವಾದ ಆರೋಪ ವೊಂದನ್ನು ಮಾಡಿದ್ದು ಸಂಘಟನೆ ಯಿಂದ ಈ ಒಂದು ಆರೋಪ ಕೇಳಿ ಬಂದಿದೆ ಹೌದು ಕೋವಿಡ್‌ನಿಂದ ಶಾಲೆ ಯಿಂದ ಹೊರಗೆ ಉಳಿದ ಮಕ್ಕಳನ್ನು ಶಾಲೆಗೆ ವಾಪಸು ಕರೆ ತರುವಲ್ಲಿ ವಿಫಲವಾಗಿದ್ದಾರೆ.ಕೋವಿಡ್‌ನಿಂದ ಎರಡು ವರ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಕೋವಿಡ್ ನಿಂದ ಶಿಕ್ಷಣ ವಂಚಿತ ಮಕ್ಕಳನ್ನು ವಾಪಸು ಕರೆ ತರಲು ಯಾವುದೇ ಕ್ರಮ ಜರುಗಿಸಿಲ್ಲ.ಹೀಗಾಗಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸುವಲ್ಲಿ ಬಿ.ಸಿ. ನಾಗೇಶ್ ವಿಫಲರಾಗಿದ್ದಾರೆ ಶಿಕ್ಷಣ ಹಕ್ಕು ಕಾಯ್ದೆ ಅಡಿ ಶಿಕ್ಷಕರನ್ನು ನೇಮಿಸಬೇಕೆಂದು ಇದ್ದರೂ ಈವರೆಗೂ ನೇಮಕ ಮಾಡದೇ ಮಕ್ಕಳ ಕಲಿಕೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಸಂಘಟನೆ ಹೇಳಿದೆ
ಸಂವಿಧಾನ ಉಲ್ಲಂಘನೆಯಾಗಿದ್ದು ಈ ಮೇಲಿನ ಆರೋಪ ದಿಂದ ಭಾರತ ಸಂವಿಧಾನದ ವಿಧಿ 14, 15, 21, 21A, 24.39 (E) (F), 41, 46 ಮತ್ತು 47 ಉಲ್ಲಂಘನೆ ಮಾಡಿದ್ದಾರೆ ಎಂದು ಬಹುತ್ವ ಕರ್ನಾಟಕ ಅರೋಪಿಸಿದೆ. ಅಲ್ಲದೇ ಮಕ್ಕಳ ಹಕ್ಕು ಕಾಯ್ದೆ ಸೆಕ್ಷನ್ 3, 4, 8, 25, 26, 29, 34, ಉಲ್ಲಂಘನೆ ಎಂದು ಉಲ್ಲೇಖಿಸಲಾಗಿದೆ.