ದಾವಣಗೆರೆ –
ರಾಜ್ಯದ ಶಿಕ್ಷಕರ ಕೆಲವೊಂದಿಷ್ಟು ಸಮಸ್ಯೆಗಳ ಕುರಿತಂತೆ ಶಿಕ್ಷಕರು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರನ್ನು ಭೇಟಿ ಯಾದರು.ಹೌದು ದಾವಣಗೆರೆ ಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಚಿವರನ್ನು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಭೇಟಿಯಾಗಿ ಸಮಸ್ಯೆಗಳ ಕುರಿತಂತೆ ಮನವಿ ಸಲ್ಲಿಸಿದರು.ಅದರಲ್ಲೂ ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕವಾದ ವರ್ಗಾವ ಣೆಯ ನೀತಿಯಿಂದಾಗಿ ಬೇಸತ್ತಿರುವ ಶಿಕ್ಷಕರು ವರ್ಗಾವ ಣೆಯ ವಿಚಾರವನ್ನು ಮುಂದಿಟ್ಟುಕೊಂಡು ಶಿಕ್ಷಣ ಸಚಿವ ರನ್ನು ಭೇಟಿಯಾಗಿ ಚರ್ಚೆಯನ್ನು ಮಾಡಿದರು.
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ದವರು ಶಿಕ್ಷಣ ಸಚಿವರಲ್ಲಿ ಪ್ರಮುಖವಾಗಿ ಕಲಿಕಾ ಹಾಳೆ ಸರಬರಾಜು ಬಗ್ಗೆ ಹಾಗೂ 21 22 ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ಬಗ್ಗೆ ಹಾಗೂ ಸಿ ಆರ್ ಪಿ ಕೌನ್ಸಿಲಿಂಗ್ ದಿನಾಂಕ ನಿಗದಿ ಬಗ್ಗೆ ಹಾಗೂ NEP ಆನ್ ಲೈನ್ ತರಬೇತಿ ಸಮಸ್ಯೆಯ ಬಗ್ಗೆ ಜಿಪಿಟಿ ಮತ್ತು ಪಿ ಎಸ್ ಟಿ ಹುದ್ದೆಯ ಮರು ಹೊಂದಾಣಿಕೆ ಬಗ್ಗೆ ಮಾನ್ಯ ಸಚಿವರಲ್ಲಿ ಜಿಲ್ಲಾ ಸಂಘದವರು ಹಾಗೂ ತಾಲೂಕು ಸಂಘದ ಪದಾಧಿಕಾರಿಗಳು ರಾಜ್ಯದ ಶಿಕ್ಷಕರ ಪರವಾಗಿ ವಿನಮ್ರತೆಯಿಂದ ಕೋರಿಕೊಂಡು ಸಮಸ್ಯೆ ಪರಿಹಾರಕ್ಕೆ ಒತ್ತಾಯವನ್ನು ಮಾಡಿದರು.