ಬೆಂಗಳೂರು –
ಬೆಳ್ಳಂ ಬೆಳಿಗ್ಗೆ ರಾಜ್ಯದಲ್ಲಿ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.ಹೌದು ಸೂರ್ಯ ಉದಯಿಸುವ ಮುನ್ನವೇ ರಾಜ್ಯದ ತುಂಬೆಲ್ಲಾ ಎಸಿಬಿ ಅಧಿಕಾರಿಗಳು ಪಿಲ್ಡಿಗಿಳಿದು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದಾರೆ.ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದು ಬೆಂಗಳೂರು ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ ಹಲವು ಅಧಿಕಾರಿಗಳ ಮನೆ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಳಗಾಗುವ ಮುನ್ನವೇ ಭ್ರಷ್ಟ ಅಧಿಕಾರಿಗಳ ನಿವಾಸದ ಬಾಗಿಲು ತಟ್ಟಿದ ಎಸಿಬಿ ಅಧಿಕಾರಿಗಳು ಬೆಳಗ್ಗೆ 6 ಗಂಟೆ ಸುಮಾರಿಗೆ ಎಸಿಬಿ ಅಧಿಕಾರಿಗಳು ಬೆಂಗಳೂರು ಸೇರಿ ದಂತೆ 10 ಜಿಲ್ಲೆಗಳಲ್ಲಿ ಹಲವು ಅಧಿಕಾರಿಗಳ ಮನೆ, ಕಚೇರಿ ಗಳ ಮೇಲೆ ದಾಳಿ ನಡೆಸಿದ್ದೃ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಹಾಸನದಲ್ಲಿ ದಾಳಿ
ಹೌದು ನಗರದಲ್ಲೂ ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿಯನ್ನು ಮಾಡಿದ್ದು ಸಣ್ಣ ನೀರಾವರಿ ಇಲಾಖೆಯ ಎಇಇ ರಾಮಕೃಷ್ಣ ಮನೆ ಮೇಲೆ ದಾಳಿ ಮಾಡಲಾಗಿದ್ದು ರಾಮಕೃಷ್ಣಗೆ ಸೇರಿದೆ ಮನೆ, ಆಫೀಸ್ ಸೇರಿ ಮೂರು ಕಡೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳ ತಂಡ ಪರಿಶೀಲನೆ ಮಾಡತಾ ಇದ್ದಾರೆ. ಹಾಸನದ ವಿದ್ಯಾನಗರದಲ್ಲಿರುವ ರಾಮಕೃಷ್ಣ ನಿವಾಸ,ಹಿರಿಸಾವೆಯಲ್ಲಿರೋ ತಮ್ಮ ಬೋರಣ್ಣ ನಿವಾಸ ಹಾಗೂ ಕುವೆಂಪು ನಗರದಲ್ಲಿರುವ ಕಚೇರಿ ಮೇಲೂ ದಾಳಿಯನ್ನು ಮಾಡಲಾಗಿದೆ.ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿರುವ ರಾಮಕೃಷ್ಣ ಮನೆಯಲ್ಲಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ ಅಧಿಕಾರಿಗಳ ತಂಡ,ಎಸಿಬಿ ಡಿವೈಎಸ್‌ಪಿ ಸತೀಶ್ ನೇತೃತ್ವದಲ್ಲಿ ಮೂರು ಕಡೆ ದಾಳಿಯಾಗಿದೆ. ಹಾಸನ ದಲ್ಲಿ ಎಇಇ ರಾಮಕೃಷ್ಣ ಮನೆ ಕಚೇರಿ ಸೇರಿ 3 ಕಡೆ ಇಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ವಿದ್ಯಾನಗರ ನಿವಾಸ, ಹಿಸಾವೆ ನಿವಾಸ ಹಾಗೂ ಕುವೆಂಪು ನಗರದ ಕಚೇರಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀನಲನೆ ನಡೆಸಿದ್ದಾರೆ.
ಧಾರವಾಡದಲ್ಲೂ ದಾಳಿ
ನಗರದಲ್ಲೂ ಕೂಡಾ ಭ್ರಷ್ಟ ಸರ್ಕಾರಿ ಅಧಿಕಾರಿಯ ಮನೆಯ ಮೇಲೆ ಎಸಿಬಿ ದಾಳಿಯಾಗಿದ್ದು ಬಾಗಲಕೋಟೆ ಯಲ್ಲಿ ಆರ್ ಟಿ ಓ ಇನ್ಸ್ಪೇಕ್ಟರ್ ಆಗಿರುವ ಯಲ್ಲಪ್ಪ ಪಡಸಾಲೆ ನಿವಾಸದ ಮೇಲೆ ದಾಳಿಯಾಗಿದ್ದು ನಗರದ ಲಕಮನಹಳ್ಳಿ ಬಡಾವಣೆಯಲ್ಲಿರುವ ನಿವಾಸದ ಮೇಲೆ ಎಸಿಬಿ ಡಿವೈಎಸ್ಪಿ ಮಹಾಂತೇಶ ಜಿದ್ದಿ ಮತ್ತು ಸಿಬ್ಬಂದಿಗಳ ನೇತ್ರತ್ವದಲ್ಲಿ ಈ ಒಂದು ದಾಳಿಯನ್ನು ಮಾಡಲಾಗಿದೆ. ನಾಲ್ವರು ಅಧಿಕಾರಿಗಳ ನೇತ್ರತ್ವದಲ್ಲಿ ದಾಳಿ ಮಾಡಿ ಪರಿಶೀಲನೆಯನ್ನು ಮಾಡಲಾಗುತ್ತಿದೆ.
ಬಾಗಲಕೋಟೆಯಲ್ಲೂ ದಾಳಿ
ಬಾಗಲಕೋಟೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರ್ ಗೋಗಿ ಮನೆ ಮತ್ತು ಕಚೇರಿಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ಮಾಡಲಾಗಿದೆ. ಬೆಳ್ಳಂ ಬೆಳಿಗ್ಗೆ ಇಲ್ಲೂ ದಾಳಿಯನ್ನು ಮಾಡಲಾಗಿದ್ದು ನಾಲ್ಕೈದು ಅಧಿಕಾರಿಗಳ ಮತ್ತು ಟೀಮ್ ನೇತ್ರತ್ವದಲ್ಲಿ ಈ ಒಂದು ದಾಳಿಯಾಗಿದ್ದು ದಾಖಲೆಗಳ ಪರಿಶೀಲನೆಯನ್ನು ಮಾಡಲಾಗುತ್ತಿದೆ.
ಕಲಬುರಗಿ ಯಲ್ಲೂ ದಾಳಿ
ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂ ಬೆಳಗ್ಗೆ ಬೀದರ್ ನಲ್ಲೂ ಎಸಿಬಿ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದು ಬೀದರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರೂಪಣಾಧಿಕಾರಿ ಮನೆ ಮೇಲೆ ಎಸಿಬಿ ದಾಳಿಯಾಗಿದೆ.ಕಲಬುರಗಿ ನಗರದ ಕೆ ಎಚ್ ಬಿ ಕಾಲೋನಿಯ ನಿವಾಸದ ಮೇಲೆ ಎಸಿಬಿ ದಾಳಿ ಮಾಡಲಾಗಿದೆ.ತಿಪ್ಪಣ್ಣ ಸಿರಸಗಿ ಬೀದರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರುಪಣಾಧಿಕಾರಿ ಯಾಗಿದ್ದು ತಿಪ್ಪಣ್ಣ ಸಿರಸಗಿ ಈ ಹಿಂದೆ ಮಹಿಳೆಯರಿಗೆ ಉದ್ಯೋಗ ಕೋಡಿಸು ವದಾಗಿ ಲಕ್ಷಾಂತರ ಹಣ ಲೂಟಿ ಮಾಡಿದ್ದ ಹೀಗಾಗಿ ಸಧ್ಯ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡತಾ ಇದ್ದಾರೆ.
ಬೀದರ್ ನಲ್ಲೂ ದಾಳಿ
ಗಡಿ ಜಿಲ್ಲೆ ಬೀದರ್ ನಲ್ಲಿ ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿ ಗಳು ನಾಲ್ವರು ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿಯನ್ನು ಮಾಡಿದ್ದಾರೆ.ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ ಕಚೇರಿ ಮೇಲೆ ಎಸಿಬಿ ದಾಳಿಯನ್ನು ಮಾಡಲಾ ಗಿದೆ.ಬೀದರ್ ನ ಗುಂಪಾ ಬಳಿ ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಮೇಲೆ ದಾಳಿ. ಜೊತೆಗೆ ಕಲಬುರಗಿಯ ನಿವಾಸದ ಮೇಲೂ ದಾಳಿಯನ್ನು ಮಾಡಲಾಗಿದೆ.ಪಶು ವಿವಿ ಅಧಿಕಾರಿಯ ನಿವಾಸ ಸೇರಿ ದಂತೆ ನಾಲ್ಕು ಕಡೆ ಎಸಿಬಿ ದಾಳಿಯನ್ನು ಮಾಡಲಾಗಿದೆ. ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿವಿಯ ಅಧಿಕಾರಿ ಮೃತುಂಜ್ಯಯ ಕಿರಣಾ ನಿವಾಸದ ಮೇಲೆ ದಾಳಿಯನ್ನು ಮಾಡಲಾಗಿದೆ.ಬೀದರ್ ನ ಗುಮ್ಮೆ ಕಾಲೋನಿ ಯಲ್ಲಿರುವ ನಿವಾಸ.ಜೊತೆಗೆ ಪಶು ವಿವಿಯ ಕಚೇರಿ, ಭಾಲ್ಕಿ ತಾಲೂಕಿನ ಹಾಲಹಳ್ಳಿ ಹಾಗೂ ಕಲಬುರಗಿಯ ಮಹಾಗಾಂವ್ ನ ನಿವಾಸದ ಮೇಲೂ ದಾಳಿ ಮಾಡಲಾ ಗಿದೆ.ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಎಸಿಬಿ ಪೊಲೀಸರು ದಾಳಿ ಮಾಡಲಾಗಿದೆ.ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಸಿಬಿ ಅಧಿಕಾರಿಗಳು.
ಇದರೊಂದಿಗೆ ರಾಜ್ಯದ ಹಲವೆಡೆ ಸಧ್ಯ ಎಸಿಬಿ ಅಧಿಕಾರಿ ಗಳು ದಾಳಿಯನ್ನು ಮಾಡಿದ್ದು ಪರಿಶೀಲನೆ ಮಾಡ್ತಾ ಇದ್ದಾರೆ. ಇದರೊಂದಿಗೆ ಬೆಳ್ಳಂ ಬೆಳಿಗ್ಗೆ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದು ಅಧಿಕಾರಿಗಳ ಮತ್ತು ಅವರ ಸಂಬಂಧಿಕರ ಮನೆ ಕಚೇರಿ ಮೇಲೆ ಏಕ ಕಾಲದಲ್ಲಿ ದಾಳಿ ಮಾಡಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ.