ಬೆಂಗಳೂರು –
ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ರಾಜ್ಯದಲ್ಲಿ ಮೆಗಾ ರೇಡ್ ನಡೆಸಿದ್ದಾರೆ.300ಕ್ಕೂ ಹೆಚ್ಚು ಪೊಲೀಸರು 21 ಭ್ರಷ್ಟ ಅಧಿಕಾರಿಗಳ 80 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದಾರೆ.
ಕಳೆದ ಕೆಲ ದಿನಗಳಿಂದ ಖಾಲಿ ಇದ್ದ ಲೋಕಾಯುಕ್ತರ ನೇಮಕದ ಬೆನ್ನಲ್ಲೇ ಎಸಿಬಿ ಅಧಿಕಾರಿಗಳು ಮೈ ಚಳಿ ಬಿಟ್ಟು ಭಾರೀ ಪ್ರಮಾಣದ ದಾಳಿ ನಡೆಸಿ ಸಂಚಲನ ಸೃಷ್ಟಿಸಿದ್ದಾರೆ.
ಈ ಬಾರಿ ಭ್ರಷ್ಟ ಅಧಿಕಾರಿಗಳೊಂದಿಗೆ ಇಬ್ಬರು ನಿವೃತ್ತ ಸರ್ಕಾರಿ ನೌಕರರಿಗೂ ಬಿಸಿ ಮುಟ್ಟಿಸಿರುವುದು ವಿಶೇಷ ವಾಗಿದೆ.ಬೆಳಗಾವಿಯ ಸೂಪರಿಡೆಂಟ್ ಎಂಜಿನಿಯರ್ ಭೀಮಾರಾವ್ ವೈ.ಪವಾರ್,ಉಡುಪಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತ ಹರೀಶ್,ಹಾಸನ ಸಣ್ಣ ನೀರಾವರಿ ಇಲಾಖೆಯ ಎಇಇ ರಾಮಕೃಷ್ಣ ಎಚ್.ವಿ., ಕಾರವಾರ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ರಾಜೀವ್ ಪುರುಷಯ್ಯ ನಾಯಕ್,
ಪೊನ್ನಂಪೇಟೆ ಜಿಲ್ಲಾ ಪಂಚಾಯತ್ ಜ್ಯೂನಿಯರ್ ಎಂಜಿನಿಯರ್ ಬಿ.ಆರ್.ಬೋಪಯ್ಯ,ಬೆಳಗಾಂ ಐಜಿಆರ್ ಕಚೇರಿಯ ಜಿಲ್ಲಾ ರಿಜಿಸ್ಟ್ರಾರ್ ಮಧುಸೂದನ್,ಹೂವಿನ ಹಡಗಲಿ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಪರಮೇಶ್ವರಪ್ಪ, ಬಾಗಲಕೋಟೆ ಆರ್ ಟಿಒ ಯಲ್ಲಪ್ಪ ಎನ್.ಪಡಸಾಲಿ,ಬಾಗಲಕೋಟೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಪ್ಪ ನಾಗಪ್ಪ ಗೋಗಿ,ಗದಗ ಆರ್ ಡಿ ಪಿಆರ್ ಪಂಚಾಯತ್ ಗ್ರೇಡ್ ಕಾರ್ಯದರ್ಶಿ ಪ್ರದೀಪ್ ಎಸ್.ಹಾಲೂರ್,ಬೆಂಗಳೂರಿನ ಉಪ ಮುಖ್ಯ ವಿದ್ಯುತ್ ಇನ್ಸ್ಪೆಕ್ಟರ್ ಸಿದ್ದಪ್ಪ ಟಿ.,
ಬೀದರ್ ಜಿಲ್ಲಾ ಯೋಜನಾಕಾರಿ ತಿಪ್ಪಣ್ಣ ಪಿ.ಸಿರಸಂಗಿ, ಬೀದರ್ ಪಶು ವಿಶ್ವವಿದ್ಯಾಲಯದ ಅಸಿಸ್ಟೆಂಟ್ ಕಾಂಪ್ರ್ಟಾಲರ್ ಮೃತ್ಯುಂಜಯ ಚನ್ನಬಸಯ್ಯ ತಿರಣಿ, ಚಿಕ್ಕಬಳ್ಳಾಪುರ ನೀರಾವರಿ ಇಲಾಖೆಯ ಇಇ ಮೋಹನ್ ಕುಮಾರ್, ಕಾರವಾರದ ಜಿಲ್ಲಾ ರಿಜಿಸ್ಟ್ರಾರ್ ಶ್ರೀಧರ್, ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯಪಾಲಕ ಅಭಿಯಂತ ಮಂಜುನಾಥ್ ಜಿ.,ಬಿಡಿಎನಲ್ಲಿ ಗ್ರೂಪ್ ಸಿ ಸಿಬ್ಬಂದಿಯಾಗಿರುವ ಶಿವಲಿಂಗಯ್ಯ,ಕೊಪ್ಪಳ ಪೊಲೀಸ್ ಇನ್ಸ್ಪೆಕ್ಟರ್ ಉದಯರವಿ,
ಕಡೂರು ಪುರಸಭೆಯ ಕೇಸ್ ವರ್ಕರ್ ಬಿ.ಜಿ.ತಿಮ್ಮಯ್ಯ, ರಾಣೆಬೆನ್ನೂರು ಯುಟಿಪಿ ಕಚೇರಿಯ ಚಂದ್ರಪ್ಪ ಸಿ.ಓಲೇಕಾರ್ ಹಾಗೂ ಬೆಂಗಳೂರಿನ ನಿವೃತ್ತ ಭೂ ಸೇನಾಧಿಕಾರಿ ಜನಾರ್ದನ್ ಅವರುಗಳು ಎಸಿಬಿ ಬಲೆಗೆ ಬಿದ್ದ ಭ್ರಷ್ಟರು.
ಬಿಟಿಎಂ ಬಡಾವಣೆಯ ಎಲ್‍ಬಿಎಸ್ ನಗರದಲ್ಲಿ ವಾಸವಾ ಗಿರುವ ಉಪ ಮುಖ್ಯ ವಿದ್ಯುತ್ ಇನ್ಸ್ಪೆಕ್ಟರ್ ಸಿದ್ದಪ್ಪ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಕಂತೆ ಕಂತೆ ನೋಟು ಗಳು ಕೆಜಿಗಟ್ಟಲೆ ಚಿನ್ನಾಭರಣ ಮತ್ತಿತರ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ.ಶಿವಮೊಗ್ಗದಲ್ಲಿ 4 ಹಾಗೂ ಹೊನ್ನಾ ಳಿಯಲ್ಲಿ 3 ನಿವೇಶನಗಳನ್ನು ಹೊಂದಿರುವ ಪತ್ರಗಳು,2 ಮನೆ,ಹುಟ್ಟೂರಿನಲ್ಲಿ 8 ಎಕರೆ ತೋಟ,ತಾವರೆ ಚಕ್ಕನಹ ಳ್ಳಿಯಲ್ಲಿ 1.7 ಎಕರೆ ಭೂಮಿ,7 ಲಕ್ಷ ನಗದು,1 ಕೆಜಿಗೂ ಹೆಚ್ಚು ಚಿನ್ನಾಭರಣ ಹಾಗೂ ಐಷಾರಾಮಿ ಕಾರು ಹೊಂದಿ ರುವುದು ಬೆಳಕಿಗೆ ಬಂದಿದೆ.
ಮೂರು ಮನೆಗಳ ಮಾಲೀಕ ಶಿವಲಿಂಗಯ್ಯ.ಹೌದು ಮಾಡೋದು ಬಿಡಿಎನಲ್ಲಿ ಮಾಲಿ ಕೆಲಸ.ಆದರೆ,ಈತ ಸಂಪಾದನೆ ಮಾಡಿರೋದು ಮೂರು ಮನೆಗಳು. ಕೂಲಿ ನಾಲಿ ಮಾಡಿ ಬದುಕು ಸಾಗಿಸೋದೇ ಕಷ್ಟ ಅನ್ನೋ ಈ ಕಾಲದಲ್ಲಿ ಕೇವಲ ಮಾಲಿ ಕೆಲಸ ಮಾಡಿಕೊಂಡು ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಈತ ಮೂರು ಭವ್ಯ ಬಂಗಲೆಗಳನ್ನು ಹೊಂದಿರುವುದು ಹಲವರನ್ನು ಹುಬ್ಬೇರಿಸುವಂತೆ ಮಾಡಿದೆ.
ನಿವೃತ್ತ ಅಧಿಕಾರಿಗಳ ಅಕ್ರಮ ಸಂಪತ್ತು ಹೌದು ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯ ಪಾಲಕ ಅಭಿಯಂತರರಾಗಿದ್ದು, ಸೇವೆಯಿಂದ ನಿವೃತ್ತರಾ ಗಿರುವ ಮಂಜುನಾಥ್,ಭೂಮಾಪನ ಇಲಾಖೆಯಲ್ಲಿ ನಿವೃತ್ತ ಅಧಿಕಾರಿಯಾಗಿರುವ ಜನಾರ್ದನ್ ಅವರ ನಿವಾಸಗಳ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಂಜುನಾಥ್ ಅವರ ಬಸವೇಶ್ವರನಗರದಲ್ಲಿರುವ ಶಾರದಾ ಕಾಲೋನಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ಜಯನಗರ 9ನೆ ಬ್ಲಾಕ್‍ನ ಚೈತನ್ಯ ಗೋಲ್ಡ್ ಕಾಂಪ್ಲೆಕ್ಸ್ ಹಾಗೂ ಮಗಳ ಹೆಸರಿನಲ್ಲಿರುವ ಕೆಆರ್ ಪುರಂನ ಅಪಾರ್ಟ್‍ಮೆಂಟ್,ತಾವರೆಕೆರೆಯಲ್ಲಿ ತಾಯಿ ಹೆಸರಿನಲ್ಲಿರುವ 4 ಎಕರೆ ಜಮೀನು ಮತ್ತಿತರ ದಾಖಲೆ ಗಳನ್ನು ವಶಪಡಿಸಿಕೊಳ್ಳಲಾಗಿದೆ.ಅದೇ ರೀತಿ ಜನಾರ್ದನ್ ಅವರು ಅಕ್ರಮವಾಗಿ ಸಂಪಾದಿಸಿದ್ದ ಭಾರೀ ಆಸ್ತಿಯನ್ನು ಎಸಿಬಿ ಅಧಿಕಾರಿಗಳು ಬಯಲಿಗೆಳೆದಿದ್ದಾರೆ.
ಕಾರವಾರ – ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಉಪನೋಂದಣಾಧಿಕಾರಿಯಾಗಿರುವ ಶ್ರೀಧರ್ ಅವರ ಕನಕಪುರ ಸಮೀಪದ ಅಗರದಲ್ಲಿರುವ ತೋಟದ ಮನೆ ಹಾಗೂ ಮತ್ತಿತರ ಕಡೆಗಳಲ್ಲೂ ದಾಳಿ ನಡೆದಿದೆ. ಕೋಲಾರ ಎಸಿಬಿಯ ಡಿವೈಎಸ್‍ಪಿ ಸುಧೀರ್ ನೇತೃತ್ವದ 8 ಅಧಿಕಾರಿ ಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ ಮಡಿಕೇರಿ, ಬೆಂಗಳೂ ರಿನ ಎಚ್‍ಎಸ್‍ಆರ್ ಲೇಔಟ್,ಕೋಲಾರ,ಕನಕಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಸಂಪಾದಿಸಿ ರುವ ಕೋಟಿ ಕೋಟಿ ಸಂಪತ್ತನ್ನು ಪತ್ತೆ ಹಚ್ಚಿದೆ.
ಹಾಸನ – ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿರುವ ರಾಮಕೃಷ್ಣ ಅವರ ಮನೆ ಮೇಲೆ ಎಸಿಬಿ ಡಿವೈಎಸ್‍ಪಿ ಸತೀಶ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿ ಭಾರೀ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಹಚ್ಚಿದೆ.ಹಾಸನದ ವಿದ್ಯಾನಗರದಲ್ಲಿರುವ ರಾಮಕೃಷ್ಣ ಅವರ ನಿವಾಸ,ಹಿರೀಸಾವೆಯಲ್ಲಿರುವ ಮತ್ತೊಂದು ಮನೆ ಹಾಗೂ ಕುವೆಂಪು ನಗರದಲ್ಲಿರುವ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ ಪರಿಶೀಲನೆ ಸಂದರ್ಭದಲ್ಲಿ ರಾಮಕೃಷ್ಣ ಅವರು ಸಂಪಾದ ನೆಗಿಂತ ಮೂರು ಪಟ್ಟು ಹೆಚ್ಚು ಅಕ್ರಮ ಆಸ್ತಿ ಸಂಪಾದಿಸಿ ರುವುದು ಕಂಡುಬಂದಿದೆ.
ಉಡುಪಿ – ಇಲ್ಲಿನ ಸಣ್ಣ ನೀರಾವರಿ ಇಲಾಖೆಯ ಜ್ಯೂನಿ ಯರ್ ಎಂಜಿನಿಯರ್ ಹರೀಶ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಭಾರೀ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.ಚಿನ್ನದ ತಟ್ಟೆ,ಲೋಟ,ಕೈ ಬಲೆಗಳು,ನೆಕ್ಲೆಸ್ ಸೇರಿದಂತೆ ಹಲವಾರು ಆಭರಣಗಳ ಖಜಾನೆಯೇ ಪತ್ತೆಯಾಗಿದೆ. ಹಾಗೂ 4 ಲಕ್ಷ ನಗದು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಕ್ರಮವಾಗಿ ಸಂಪಾದಿ ಸಿರುವ ದಾಖಲೆಗಳು ಎಸಿಬಿ ಅಕಾರಿಗಳಿಗೆ ಸಿಕ್ಕಿಬಿದ್ದಿದೆ.
ಕೊಪ್ಪಳ – ಪೊಲೀಸ್ ಇನ್ಸ್ಪೆಕ್ಟರ್ ಆಗಿರುವ ಉದಯರವಿ ಅವರ ನಿವಾಸ,ಮುದಗಲ್‍ನಲ್ಲಿರುವ ಪೋಷಕರ ಮನೆ ಹಾಗೂ ಸ್ನೇಹಿತರ ನಿವಾಸಗಳ ಮೇಲೂ ಎಸಿಬಿ ಪೊಲೀಸರು ಮುಗಿಬಿದ್ದಿದ್ದು ದಾಳಿ ಸಂದರ್ಭದಲ್ಲಿ 8 ಲಕ್ಷ ನಗದು,600 ಗ್ರಾಂ ಚಿನ್ನಾಭರಣ ಹಾಗೂ ಇನ್ನಿತರ ಹಲವಾರು ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ.
ಬೀದರ್ – ಇಲ್ಲಿನ ಜಿಲ್ಲಾ ಯೋಜನಾಧಿಕಾರಿ ತಿಪ್ಪಣ್ಣ ಪಿ.ಸಿರಸಂಗಿ ಅವರು 5 ಎಕರೆ ಜಮೀನು ಹೊಂದಿದ್ದು, ತಾಯಿ ಹೆಸರಿನಲ್ಲಿ 5 ಎಕರೆ ಜಮೀನು ಖರೀದಿ ಮಾಡಿ ದ್ದಾರೆ.ತೋಟದ ಮನೆ,ಒಂದು ಸೈಟ್ ಹಾಗೂ ಕೆಎಚ್‍ಬಿ ಕಾಲೋನಿಯಲ್ಲಿ ಒಂದು ಸೈಟ್ ಖರೀದಿಸಿದ್ದು ಅವುಗಳ ದಾಖಲೆಗಳನ್ನು ಎಸಿಬಿ ತಂಡ ಪರಿಶೀಲಿಸುತ್ತಿದೆ.
ಧಾರವಾಡ – ಎಸಿಬಿ ಅಧಿಕಾರಿ ಮಹಾಂತೇಶ್ ಜಿದ್ದಿ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಬಾಗಲಕೋಟೆ ಯಲ್ಲಿ ಆರ್ ಟಿಓ ಇನ್ಸ್ಪೆಕ್ಟರ್ ಆಗಿರುವ ಯಲ್ಲಪ್ಪ ಪಡಸಾಲೆ ಅವರ ಧಾರವಾಡ ಲಕಮನಹಳ್ಳಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ಅವರು ಅಕ್ರಮವಾಗಿ ಸಂಪಾದಿಸಿರುವ ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ಇದೇ ವೇಳೆ ಅವರ ಸಂಬಂಧಿಕರ ಮನೆಯಲ್ಲಿ ಇಟ್ಟಿದ್ದ 42 ಲಕ್ಷ ರೂಪಾಯಿ ನಗರದು ಹಣವನ್ನು ಪತ್ತೆ ಹಚ್ಚಲಾಗಿದೆ.
ಬಾಗಲಕೋಟೆ – ಆರ್‌ಟಿಓ ಅಧಿಕಾರಿ ಯಲ್ಲಪ್ಪ ಪಡಸಾಲಿ ಅವರ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ 1.33 ಸಾವಿರ ನಗದು ಹಣ ಮನೆಯಲ್ಲಿ ಸಿಕ್ಕಿದ್ದರೆ, ಕಾರಿನಲ್ಲಿ 50 ಸಾವಿರ ಪತ್ತೆಯಾಗಿದೆ.ಇದಲ್ಲದೆ ಕಪಾಟಿನಲ್ಲಿ ವಿವಿಧ ಮೂಲೆಗಳಲ್ಲಿ ಚಿನ್ನಾಭರಣಗಳು ಹಾಗೂ ಕೆಲ ಆಸ್ತಿ ಪತ್ರಗಳು ಪತ್ತೆಯಾಗಿವೆ.
ಬೀದರ್ – ತಿಪ್ಪಣ್ಣ ಪಿ ಸರಸಗಿ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮಾಂಗಲ್ಯ ಸರಗಳು ಸೇರಿದಂತೆ ಚಿನ್ನದಲ್ಲಿ ಮಾಡಿದಂತಹ ಗೆಜ್ಜೆಗಳು,ಸರಗಳು ಹಾಗೂ ಸುಮಾರು 2.5 ಲಕ್ಷ ರೂ. ನಗದು ಸೇರಿದಂತೆ ಚಿನ್ನದ ಬಿಸ್ಕೆಟ್,ಚಿನ್ನದ ಉಂಗುರ,ಚಿನ್ನದ ಕಾಸುಗಳು ಸೇರಿದಂತೆ ಅಪಾರ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.