ಬೆಂಗಳೂರು –
ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಮುಂದಾದ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ಬೆಂಗಳೂರು ಮತ್ತೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಭೆ ಕರೆದರು ನೌಕರರು
ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ಸರ್ವ ಸದಸ್ಯರ ವಿಶೇಷ ಸಭೆಯನ್ನು ಇದೇ ರವಿವಾರ 19-6-2022 ರಂದು ಕರೆಯಲಾಗಿದೆ.ಗಾಂಧಿ ಭವನ,ಕುಮಾರ ಕೃಪ ರಸ್ತೆಯ ಶಿವಾನಂದ ಸರ್ಕಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.ಬೆಳಿಗ್ಗೆ 10 ಗಂಟೆಯ ಈ ಒಂದು ವಿಶೇಷವಾದ ಸಭೆಯಲ್ಲಿ ರಾಜ್ಯ, ಜಿಲ್ಲೆ,ತಾಲ್ಲೂಕುಗಳ ಅಧ್ಯಕ್ಷರುಗಳು,ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು,ಖಜಾಂಚಿಯವರು,ಸರ್ವ ಪದಾಧಿಕಾರಿ ಗಳು ಹಾಗೂ NPS,OPS ನೌಕರರು ಪಾಲ್ಗೊಳ್ಳಲಿದ್ದಾರೆ.
ನಿಶ್ಚಿತ ಪಿಂಚಣಿ ನಮ್ಮ ಹಕ್ಕು ಎನ್ನುತ್ತಾ
ಸರ್ವರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು STATE MEDIA WING KSG NPS EA ಸಂಘಟನೆ ಕೋರಿದೆ.