ಬೆಂಗಳೂರು –
ರಾಜ್ಯದ ‘ಸಾರಿಗೆ ನೌಕರ’ರಿಗೆ ರಾಜ್ಯ ಸರ್ಕಾರವು ಬಂಪರ್ ಗಿಫ್ಟ್ ನ್ನು ನೀಡಿದ್ದು ಶೇ.12.50ರಷ್ಟು ಮೂಲವೇತನವನ್ನು ಹೆಚ್ಚಿಸಿ ಸರ್ಕಾರ ಆದೇಶವನ್ನು ಮಾಡಿದೆ ಹೌದು ಇಂದಿನಿಂದಲೇ ಜಾರಿ ಬರುವಂತೆ ಸೂಚನೆ ನೀಡಲಾಗಿದೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಲಕ್ಷಾಂತರ ನೌಕರರು ಮತ್ತು ಅಧಿಕಾರಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ನಿಗಮದ ನೌಕರರು ಹಾಗೂ ಅಧಿಕಾರಿಗಳ (ಪೂರ್ವ ಕಿಂಕೋ ನೌಕರರು ಸೇರಿದಂತೆ) ಮೂಲವೇತನವನ್ನು ಶೇಕಡಾ 12.50 ರಷ್ಟು ಹೆಚ್ಚಿಸಿ, ವೇತನ ಶ್ರೇಣಿಯನ್ನು ಪರಿಷ್ಕರಿಸಲು ಸರ್ಕಾರ ಅಂತಿಮ ಅನುಮೋದನೆ ನೀಡಿದೆ ನಿಗಮದ ಲೆಕ್ಕಪತ್ರ ಇಲಾಖೆಯು ಈ ಕುರಿತು ಅಧಿಕೃತ ಸುತ್ತೋಲೆ (ಸಂಖ್ಯೆ: 04/2026) ಹೊರಡಿ ಸಿದ್ದು, ಜುಲೈ 2026 ರ ಮಾಹೆಯ ವೇತನದಿಂದಲೇ ಈ ಪರಿಷ್ಕೃತ ವೇತನ ಅನುಷ್ಠಾನಕ್ಕೆ ಬರಲಿದೆ.
ಒಇಇ

ರಾಜ್ಯದಲ್ಲಿ ನಾಲ್ಕೂ ರಸ್ತೆ ಸಾರಿಗೆ ನಿಗಮಗಳಾದ ಕರಾರಸಾ ನಿಗಮ (KSRTC), ಬೆಂಮಸಾ ಸಂಸ್ಥೆ (BMTC), ವಾಕರಸಾ ಸಂಸ್ಥೆ (NWKRTC) ಹಾಗೂ ಕಕರಸಾ ನಿಗಮಗಳ (KKRTC) ಅರ್ಹ ನೌಕರರ ವೇತನ ಪರಿಷ್ಕರಣೆಗೆ ಈ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದನ್ನು ಪುರಸ್ಕರಿಸಿರುವ ಸರ್ಕಾರವು, ದಿನಾಂಕ 31.03.2025 ರಂದು ನೌಕರರು ಪಡೆಯುತ್ತಿದ್ದ ಮೂಲ ವೇತನಕ್ಕೆ ಶೇ. 12.50 ರಷ್ಟು ಹೆಚ್ಚಳ ನೀಡಿ, ದಿನಾಂಕ 01.04.2025 ರಿಂದ ಪೂರ್ವಾನ್ವಯವಾಗುವಂತೆ ಪರಿಷ್ಕೃತ ವೇತನ ಶ್ರೇಣಿಗಳನ್ನು ಜಾರಿಗೊಳಿಸಲು ಆದೇಶಿಸಿದೆ.
ಹೊಸ ನಿಯಮಾವಳಿಗಳ ಪ್ರಕಾರ ನೌಕರರ ಪರಿಷ್ಕೃತ ವೇತನವನ್ನು ಈ ಕೆಳಗಿನ ಸೂತ್ರದಂತೆ ಲೆಕ್ಕಹಾಕಲಾಗುತ್ತದೆ
ಮೂಲ ವೇತನ ಹೆಚ್ಚಳ: 31.03.2025 ರಲ್ಲಿದ್ದ ಮೂಲ ವೇತನಕ್ಕೆ ಶೇ. 12.50 ರಷ್ಟು ಮೊತ್ತವನ್ನು ಪ್ರಥಮವಾಗಿ ಕೂಡಿಸಲಾಗುತ್ತದೆ.ಇದರೊಂದಿಗೆತುಟ್ಟಿಭತ್ಯೆ ಸೇರ್ಪಡೆ ನಿಗಮದ ನಿಯಮಾವಳಿಗಳನ್ವಯ ನಿಗದಿಪಡಿಸಲಾಗಿರುವ ಮೂಲ ತುಟ್ಟಿ ಭತ್ಯೆಯ ಮೊತ್ತವನ್ನೂ ಇದಕ್ಕೆ ಸೇರಿಸಲಾಗುತ್ತದೆ.
ವಾರ್ಷಿಕ ಬಡ್ತಿ ದಿನಾಂಕ 01.04.2025 ರಂದು ವಾರ್ಷಿಕ ವೇತನ ಬಡ್ತಿ ಲಭ್ಯವಿದ್ದಲ್ಲಿ ಪ್ರಸಕ್ತ ಶ್ರೇಣಿಯ ಬಡ್ತಿ ಮೊತ್ತವನ್ನೂ ಸೇರಿಸಿ ಒಟ್ಟು ಮೊತ್ತವನ್ನು ಹೊಸ ವೇತನ ಶ್ರೇಣಿಯ ಮುಂದಿನ ಹಂತಕ್ಕೆ ನಿಗದಿಪಡಿಸಲಾಗುತ್ತದೆ.15 ವರ್ಷ ಸೇವೆ ಸಲ್ಲಿಸಿದ ವರಿಗೆ ವಿಶೇಷ ಸೌಲಭ್ಯ ಮುಂಬಡ್ತಿ ಅವಕಾಶಗಳಿಲ್ಲದ ಅಥವಾ ಮುಂಬಡ್ತಿ ಸಿಗದೆ 15 ವರ್ಷಗಳ ನಿರಂತರ ಸೇವೆ ಮುಗಿಸಿದ ನೌಕರರಿಗೆ ಉನ್ನತ/ಮಧ್ಯವರ್ತಿ ವೇತನ ಶ್ರೇಣಿಯಲ್ಲಿ ವೇತನ ನಿಗದಿಪಡಿಸಲಾಗುತ್ತದೆ. ಈ ಸೌಲಭ್ಯ ಇಡೀ ಸೇವಾವಧಿಯಲ್ಲಿ ಒಮ್ಮೆ ಮಾತ್ರ ಲಭ್ಯವಿರಲಿದೆ.
ಹಿಂಬಾಕಿ (Arrears) ಮತ್ತು ನಿವೃತ್ತಿ ಸೌಲಭ್ಯಗಳ ಪಾವತಿ
ದಿನಾಂಕ 01.04.2025 ರಿಂದ 30.06.2026 ರವರೆಗಿನ ಅವಧಿಯ ಪರಿಷ್ಕೃತ ವೇತನದ ಹಿಂಬಾಕಿ (ಅರಿಯರ್ಸ್), ಉಪಧನ (Gratuity) ಮತ್ತು ನಿವೃತ್ತ ಗಳಿಕೆ ರಜೆ ನಗದೀ ಕರಣದ ವ್ಯತ್ಯಾಸದ ಮೊತ್ತವನ್ನು ಲೆಕ್ಕ ಹಾಕಿ ಬಿಲ್ಲುಗಳನ್ನು ಸಿದ್ಧಪಡಿಸಲು ಸೂಚಿಸಲಾಗಿದೆ. ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಈ ಹಿಂಬಾಕಿ ಮೊತ್ತವನ್ನು ಹಂತ ಹಂತವಾಗಿ ಪಾವತಿಸಲು ಪ್ರತ್ಯೇಕ ಆದೇಶ ಹೊರಡಿಸಲಾ ಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಅವಧಿ ಯಲ್ಲಿ ಸೇವೆ ಹಾದಿಯಲ್ಲಿ ನಿವೃತ್ತರಾದ/ಸೇವಾ ವಿಮುಕ್ತರಾದ ನೌಕರರಿಗೂ ಈ ವೇತನ ಪರಿಷ್ಕರಣೆ ಅನ್ವಯಿಸಲಿದೆ.
ಈ ಮಹತ್ವದ ನಿರ್ಧಾರದಿಂದ ಸಾರಿಗೆ ನೌಕರರ ಬಹುದಿನಗಳ ಬೇಡಿಕೆಯೊಂದು ಈಡೇರಿದಂತಾಗಿದ್ದು, ನೌಕರರ ಆರ್ಥಿಕ ಸ್ಥಿತಿಗತಿಗೆ ದೊಡ್ಡ ಮಟ್ಟದ ಬಲ ಸಿಕ್ಕಂತಾಗಿದೆ. ತಕ್ಷಣದಿಂದಲೇ ಜುಲೈ ತಿಂಗಳ ವೇತನದಲ್ಲಿ ವ್ಯತ್ಯಾಸ ಕಾಣಿಸಲಿರುವುದರಿಂದ ನೌಕರರ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.
ಪ್ರಮೋದ್ ಕಪಲಿ ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..



