ಬೆಂಗಳೂರು –
ನಾಳೆ ಎಲ್ಲೇಡೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಇನ್ನೂ ಈ ಒಂದು ಯೋಗ ದಿನಾಚರಣೆ ಹಿನ್ನಲೆಯಲ್ಲಿ ರಾಜ್ಯಾಧ್ಯಂತ ಆಚರಣೆಗೆ ಭರದ ಸಿದ್ದತೆಗಳು ನಡೆದಿದ್ದು ಇನ್ನೂ ಶಾಲಾ ಕಾಲೇಜುಗಳಲ್ಲಿ ಕೂಡಾ ಆಚರಣೆ ಮಾಡು ವಂತೆ ಈಗಾಗಲೇ ಶಿಕ್ಷಣ ಇಲಾಖೆ ಖಡಕ್ ಸಂದೇಶವನ್ನು ನೀಡಿದ್ದು ಇದರ ನಡುವೆ ನಾಳೆ ಯೋಗ ದಿನಾಚರಣೆ ಕಾರ್ಯಕ್ರಮಕ್ಕಾಗಿ ಬೆಳಿಗ್ಗೆ ಶಾಲೆಗಳಿಗೆ ವಿದ್ಯಾರ್ಥಿಗಳು ಶಿಕ್ಷಕರು ಆಗಮಿಸುವ ಹಿನ್ನಲೆಯಲ್ಲಿ ಅರ್ಧ ದಿನ ಶಾಲೆ ಗಳನ್ನು ನಡೆಸುವಂತೆ ಇಲಾಖೆ ಆದೇಶವನ್ನು ನೀಡಿದೆ.
ಈ ಕುರಿತಂತೆ ಇಲಾಖೆಯ ಆಯುಕ್ತರು ಆದೇಶವನ್ನು ಮಾಡಿದ್ದಾರೆ.ಅರ್ಧ ದಿನ ಶಾಲೆಗಳನ್ನು ನಡೆಸಿ ಈ ಒಂದು ಅರ್ಧ ದಿನವನ್ನು 25-6-22 ರ ಶನಿವಾರ ದಿನದಂದು ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ನಡೆಸಲು ಆದೇಶ ವನ್ನು ಮಾಡಿದ್ದಾರೆ.