ಮಂಡ್ಯ –
ಕಾಲೇಜು ಪ್ರಿನ್ಸಿಪಾಲ್ ರೊಬ್ಬರು ಕಾಲೇಜ್ ಗೆ ತಡವಾಗಿ ಬಂದಿದ್ದಕ್ಕೆ ಶಾಸಕರೊಬ್ಬರು ಅವರಿಗೆ ಕಪಾಳಮೋಕ್ಷ ವನ್ನು ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.ಹೌದು ಜೆಡಿಎಸ್ ಶಾಸಕನಿಂದ ಕಪಾಳಮೋಕ್ಷ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಶಾಸಕರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಐಟಿಐ ಕಾಲೇಜಿನ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮೂಲಭೂತ ಸೌಕರ್ಯ ಸರಿಯಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಶಾಸಕ ಶ್ರೀನಿವಾಸ್ ಅವರು ಕಾಲೇಜಿನ ಪ್ರಿನ್ಸಿಪಾಲ್ ನಾಗಾನಂದ್ ಮೇಲೆ ಕಪಾಳ ಮೋಕ್ಷ ಮಾಡುವ ಮೂಲಕ ಹಲ್ಲೆಗೆ ಯತ್ನಿಸಿದ್ದಾರೆ.ಈ ಬಗ್ಗೆ ಕಾಲೇಜಿನ ಪ್ರಿನ್ಸಿಪಾಲ್ ನಾಗಾನಂದ್ ಮಾತನಾಡಿ ತಪ್ಪು ಮಾಡದೇ ಹೊಡೆಸಿಕೊಂಡೆ ಯಾಕಾದ್ರೂ ಈ ಕೆಲಸಕ್ಕೆ ಸೇರಿಕೊಂಡೆ ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ.