ಬೆಂಗಳೂರು –
ಪಠ್ಯ ಪರಿಷ್ಕರಣೆ ಗೊಂದಲ ನಿವಾರಣೆ ಕುರಿತು ಬುಧವಾರ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಂತಿಮ ಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಗಿದ್ದಾರೆ ಹೌದು ಮಾಜಿ ಪ್ರಧಾನಿ ಹಿರಿಯರಾದ ಹೆಚ್.ಡಿ. ದೇವೇಗೌಡರು ಪಠ್ಯ ಪುಸ್ತಕ ಪರಿಷ್ಕರಣೆಯ ಬಗ್ಗೆ ಬರೆದಿರುವ ಪತ್ರಕ್ಕೆ ಗೌರವಪೂರ್ವಕವಾಗಿ ಉತ್ತರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತ ನಾಡಿದ ಅವರು ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿ ದಂತೆ ನಾಳೆ (ಬುಧವಾರ) ಶಿಕ್ಷಣ ಇಲಾಖೆಯ ಮುಖ್ಯಸ್ಥ ರನ್ನು ಹಾಗೂ ಸಚಿವರನ್ನು ಕರೆಯಲಾಗುತ್ತಿದೆ.ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪತ್ರದ ಸಾರವನ್ನು ಅವ ಲೋಕಿಸಲಾಗುವುದು.ಅವರ ಸಲಹೆಗಳನ್ನು ಗಂಭೀರ ವಾಗಿ ಪರಿಗಣಿಸಿ ಏನೆಲ್ಲಾ ಕ್ರಮಗಳನ್ನು ತೆಗೆದು ಕೊಳ್ಳಬ ಹುದು ಎಂಬ ಬಗ್ಗೆ ತೀರ್ಮಾನಿಸಿ ಉತ್ತರ ನೀಡಲಾಗು ವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು





















