ಬಳ್ಳಾರಿ –
ಲಂಚಕ್ಕೆ ಬೇಡಿಕೆ ಇಟ್ಟ ಪಿಡಿಓ ಕೂಡ ಜೈಲಿಗೆ
ಬಳ್ಳಾರಿ ತಾಲೂಕಿನ ಗುಡಾರನಗರ ನಿವಾಸಿ ಮನೆ ನಿರ್ಮಾಣ ಮಾಡಲು ಅನುಮತಿ ನೀಡುವಂತೆ ಶ್ರೀಧರಗಡ್ಡೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.ಮನೆ ನಿರ್ಮಾ ಣದ ಪರವಾನಗಿ ನೀಡಲು ಪಂಚಾಯಿತಿ ಸದಸ್ಯೆ ಮಹಾಲಕ್ಷ್ಮೀ ಅವರ ಪತಿ ಜಂಬಣ್ಣ ಅವರು 80 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.ಪಿಡಿಓ ಸಿದ್ದಲಿಂಗಪ್ಪ ಅವರನ್ನು ಕೇಳಿದಾಗ ಜಂಬಣ್ಣ ಹೇಳಿದ್ದೇ ಫೈನಲ್ ಅಂತ ಲಂಚದ ದಾಹವನ್ನು ತೋರಿದ್ದಾರೆ.
ಈ ಕುರಿತು ಗುಡಾರನಗರ ನಿವಾಸಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಬಳ್ಳಾರಿ ಎಸಿಬಿ ಪೊಲೀಸರು ಪಂಚಾಯಿತಿ ಸದಸ್ಯೆಯ ಪತಿ ಜಂಬಣ್ಣ, ಪಿಡಿಓ ಸಿದ್ದಲಿಂಗಪ್ಪ ಅವರನ್ನು ಬಂಧಿಸಿದ್ದಾರೆ. ಆರೋಪಿ ಗಳಿಂದ 80 ಸಾವಿರ ರೂ. ಲಂಚದ ಹಣವನ್ನು ವಶಪಡಿಸಿ ಕೊಂಡಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಳ್ಳಾರಿ ಜಿಲ್ಲಾ ಎಸಿಬಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.