ಧಾರವಾಡ –
ಪ್ರತಿಷ್ಠಿತ ಧಾರವಾಡ ದ ಕೃಷಿ ಮಹಾವಿದ್ಯಾಲಯದ ನೂತನ ಕುಲಪತಿಗಳಾಗಿ NB ಪ್ರಕಾಶ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಆದೇಶವನ್ನು ಮಾಡಿದೆ ಹೌದು PL ಪಾಟೀಲ್ ನಿವೃತ್ತಿ ನಂತರ ಖಾಲಿಯಾಗಿದ್ದ ಈ ಒಂದು ಸ್ಥಾನಕ್ಕೆ ಸಾಕಷ್ಟು ಪ್ರಮಾಣದಲ್ಲಿ ಹಲವರು ರೇಸ್ ನಲ್ಲಿ ಇದ್ದರು ಅಂತಿಮವಾಗಿ ರಾಜ್ಯಪಾಲರು NB ಪ್ರಕಾಶ್ ಅವರನ್ನು ಕುಲಪತಿಗಳಾಗಿ ನೇಮಕ ಮಾಡಿ ಆದೇಶ ಮಾಡಿದೆ
ಬೆಂಗಳೂರಿನ ಕೃಷಿ ಮಹಾವಿದ್ಯಾಲಯದ ಡೀನ್ ಆಗಿದ್ದ ಇವರಿಗೆ ಧಾರವಾಡ ದ ಕೃಷಿ ಮಹಾವಿದ್ಯಾಲಯದ ಕುಲಪತಿ ಜವಾಬ್ದಾರಿ ಯನ್ನು ನೀಡಲಾಗಿದ್ದು ಆದೇಶವಾಗುತ್ತಿದ್ದಂತೆ ಇತ್ತ ಧಾರವಾಡ ದ ಕೃಷಿ ಮಹಾವಿದ್ಯಾಲಯ ದಲ್ಲಿ ಅಧಿಕಾರವನ್ನು ವಹಿಸಿಕೊಂಡರು ಆಡಳಿತ ಮಂಡಳಿಯ ಸದಸ್ಯರು ಅಧಿಕಾರಿಗಳು ಸಿಬ್ಬಂದಿ ವರ್ಗದವರು ಸೇರಿದಂತೆ ಹಲವರು ನೂತನ ಕುಲಪತಿ ಅವರನ್ನು ಸ್ವಾಗತ ಮಾಡಿಕೊಂಡು ಅಭಿನಂದನೆ ಸಲ್ಲಿಸಿದರು
ಮಂಜು ಸರ್ವಿ ಜೊತೆ ರವಿ ಗೌಡರ ಸುದ್ದಿ ಸಂತೆ ನ್ಯೂಸ್ ಧಾರವಾಡ…..



