ಹನುಮಸಾಗರ (ಕೊಪ್ಪಳ) –
ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ ಮರುದಿನವೇ ಗ್ರಾಮಕ್ಕೆ ಬಸ್ ಬಂದಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೋನಾಪೂರ ಹಾಗೂ ಪರಮನಹಟ್ಟಿ ಗ್ರಾಮಗಳ ವಿದ್ಯಾರ್ಥಿಗಳು ಸಂಭ್ರಮಕ್ಕೆ ಕಾರಣವಾಗಿದೆ.ಈ ಗ್ರಾಮದಲ್ಲಿ 50 ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿಗಳು ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ನಿನ್ನೆ ಅಷ್ಟೇ ರಸ್ತೆಯಲ್ಲಿಯೇ ಕುಳಿತು ಓದಿ ಪ್ರತಿಭಟನೆ ಮಾಡಿದ್ದರು.ಬಸ್ ಸೌಲಭ್ಯದ ಕೊರತೆ ಕಾರಣ ಮಕ್ಕಳು ನಿತ್ಯ ನಾಲ್ಕು ಕಿ.ಮೀ.ನಡೆದುಕೊಂಡು ಶಾಲೆಗೆ ಹೋಗ ಬೇಕಾಗಿತ್ತು.ಗ್ರಾಮಕ್ಕೆ ಇಂದು ಬೆಳಿಗ್ಗೆ ಬಸ್ ಬರುತ್ತಿದ್ದಂತೆ ಸಂಭ್ರಮಿಸಿ ಮಕ್ಕಳು ಪರಸ್ಪರ ಖುಷಿ ಹಂಚಿಕೊಂಡರು.
ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಬಸ್ ಸಂಚಾರಕ್ಕೆ ಅಡ್ಡಿಯಾಗಿದ್ದ ಗಿಡಗಂಟಿ ತೆರವುಗೊಳಿಸುವುದಕ್ಕೂ ಹಾದಿ ಮಾಡಿಕೊಟ್ಟಿತು.ಶಾಸಕ ಅಮರೇಗೌಡ ಪಾಟೀಲ ಬಯ್ಯಾ ಪೂರ ಕುಷ್ಟಗಿ ಸಾರಿಗೆ ಘಟಕ್ಕೆ ಭೇಟಿ ನೀಡಿ, ಶನಿವಾರ ದಿಂದಲೇ ಆ ವಿದ್ಯಾರ್ಥಿಗಳು ಸಂಚರಿಸುವ ಗ್ರಾಮಗಳ ಮೂಲಕ ಬಸ್ ಸಂಚಾರ ಆರಂಭಿಸಬೇಕು ಹಾಗೂ ಶಾಲಾ ಮಕ್ಕಳು ಸಂಚರಿಸುವ ಎಲ್ಲ ಮಾರ್ಗಗಳ ಬಸ್‍ಗಳನ್ನು ಸರಿಯಾದ ಸಮಯಕ್ಕೆ ಓಡಿಸಬೇಕು ಎಂದು ಸೂಚಿಸಿ ದ್ದರು.ರಸ್ತೆ ಅಕ್ಕಪಕ್ಕದಲ್ಲಿ ಮುಳ್ಳುಕಂಟಿ ಬೆಳೆದು ಬಸ್‌ಗಳ ಸುಗಮ ಸಂಚಾರಕ್ಕೆ ಸಮಸ್ಯೆಯಾಗಿದೆ.ಅವುಗಳನ್ನು ತೆರವುಗೊಳಿಸಿದ್ದು ಈಗ ಬಸ್ ಸಂಚಾರ ಆರಂಭವಾಗಿದೆ. ಮಕ್ಕಳ ಮೊಗದಲ್ಲಿ ನಗು ನಲಿದಾಡಿದೆ.