ಮೈಸೂರು –
ನಿವೃತ್ತ ಶಿಕ್ಷಕರಿಂದ ಲಂಚ ಪಡೆದ ಆರೋಪದ ಮೇಲೆ ಮೈಸೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಚಂದ್ರಕಾಂತ್ ಹಾಗೂ ಕಚೇರಿ ಅಧೀಕ್ಷಕ ಶಂಕರ್ ಅವರನ್ನು ಇಲಾಖೆ ಕಚೇರಿ ಯಲ್ಲೇ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಯನ್ನು ಪೂರ್ಣಗೊಳಿಸಿ ಸಧ್ಯ ನ್ಯಾಯಾಧೀಶರ ಮುಂದೆ ಹಾಜರು ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇಬ್ಬರು ಜೈಲು ಸೇರಿದ್ದಾರೆ
ಹೌದು ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬೆಂಗಳೂರಿನ ಮಹಾ ಲೆಕ್ಕಾಧಿಕಾರಿಗಳ ಕಚೇರಿಗೆ ಕಳಿಸುವ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ ಮತ್ತು ದ್ವಿತೀಯ ದರ್ಜೆ ಸಹಾಯಕರು ₹9 ಸಾವಿರ ಕೊಡುವಂತೆ ಬೇಡಿಕೆ ಇಟ್ಟಿದ್ದರು ನಂಜನಗೂಡು ತಾಲ್ಲೂಕು ರಾಂಪುರ ಗ್ರಾಮದ ನಿವೃತ್ತ ಶಿಕ್ಷಕ ಸಿದ್ದರಾಜು ಅವರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗ ದೂರು ಕೊಟ್ಟಿದ್ದರು.ದೂರು ಆಧರಿಸಿ ಬೆಳಿಗ್ಗೆಯಿಂದ ಸಂಜೆ ತನಕ ಕಚೇರಿ ಮುಂದೆ ಕಾದ ಅಧಿಕಾರಿಗಳು ದಾಳಿ ನಡಸಿ ಒಬ್ಬರನ್ನು ವಶಕ್ಕೆ ತೆಗೆದು ಕೊಂಡು ವಿಚಾರಣೆ ಮಾಡಿದರು.
ಕಚೇರಿಯ ದ್ವಿತೀಯ ದರ್ಜೆ ಸಹಾಯಕ ರವಿ ಕಚೇರಿ ಯಿಂದ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರಿಂದ ಅಧಿಕಾ ರಿಗಳ ಕೈಗೆ ಸಿಗದೆ ಎಸ್ಕೇಪ್ ಆಗಿದ್ದು.ಇನ್ನೂ ಬಿಇಓ ಮತ್ತು ಅಧೀಕ್ಷಕ ನನ್ನು ವಶಕ್ಕೆ ತೆಗೆದುಕೊಂಡಿದ್ದ ಎಸಿಬಿ ಅಧಿಕಾರಿ ಗಳು ಸುಧೀರ್ಘವಾಗಿ ವಿಚಾರಣೆ ಮಾಡಿ ನ್ಯಾಯಾಧೀಶರ ಎದುರು ಹಾಜರು ಮಾಡಿ ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಹಿನ್ನೆಲೆಯಲ್ಲಿ ಜೈಲಿಗೆ ಕಳಿಸಲಾ ಗಿದ್ದು ಅತ್ತ ಬಿಇಓ ಮತ್ತು ಅಧೀಕ್ಷಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.