ಹುಣಸೂರು –
ಹೃದಯಾಘಾತದಿಂದ ಸಬ್ ಇನ್ಸ್ ಸ್ಪೇಕ್ಟರ್ ರೊಬ್ಬರು ನಿಧನರಾಗಿರುವ ಘಟನೆ ಹುಣಸೂರಿನಲ್ಲಿ ನಡೆದಿದೆ.ಹೌದು ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮ ಪೋಲಿಸ್ ಠಾಣೆ ಯಲ್ಲಿ ಪ್ರಸ್ತುತ ಸಬ್ ಇನ್ಸ್ ಸ್ಪೇಕ್ಟರ್ ಆಗಿ ಕರ್ತವ್ಯವನ್ನು ಮಾಡುತ್ತಿದ್ದ ಶ್ರೀಯುತ ಬ್ಯಾಡರಹಳ್ಳಿ ದೊಡ್ಡಗೌಡ ರವರು ಹೃದಯ ಘಾತದಿಂದ ತಡರಾತ್ರಿ ನಿಧನರಾಗಿದ್ದಾರೆ.
ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಕೂಡಲೇ ಆಸ್ಪತ್ರೆಗ ಕರೆದುಕೊಂಡು ಹೋಗಲು ಕುಟುಂಬದ ಸದಸ್ಯರು ಮುಂದಾಗಿದ್ದರು ಆದರೆ ಚಿಕಿತ್ಸೆ ಫಲಿಸದೇ ನಿಧನರಾಗಿದ್ದು ಇನ್ನೂ ಅಂತಿಮ ದರ್ಶನಕ್ಕಾಗಿ ಮೃತ್ತರ ಪಾರ್ಥಿವ ಶರೀರ ಹುಣಸೂರು ಪಟ್ಟಣದ ಸ್ವಗೃಹದಲ್ಲಿ ಇರಿಸಲಾಗಿದೆ.ಮೃತ್ತರ ಅಂತ್ಯಸಂಸ್ಕಾರ ಹುಣಸೂರು ತಾಲೂಕಿನ ಬಿಳಿಗೆರೆ ಗ್ರಾಮದ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ನೆಡೆಯಲಿದೆ.ನಿಧನಕ್ಕೆ ಇಲಾಖೆಯ ಸಿಬ್ಬಂದಿಗಳು ಆಪ್ತರು ತೀವ್ರ ಸಂತಾಪವನ್ನು ಸೂಚಿಸಿ ದ್ದಾರೆ.






















