ರಾಜ್ಯದ ವಿದ್ಯುತ್ ಸಮಸ್ಯೆಗೆ ಮಿಂಚಿನ ಸಂಚಾರ ಕೈಗೊಂಡ ರಾಜೇಂದ್ರ ಚೋಳನ್ – ರಾಜೇಂದ್ರ ಚೋಳನ್ ಮನವಿಗೆ ಸ್ಪಂದಿಸಿದ ಮಹಾರಾಷ್ಟ್ರ ಟೀಮ್…..

Suddi Sante Desk
ರಾಜ್ಯದ ವಿದ್ಯುತ್ ಸಮಸ್ಯೆಗೆ ಮಿಂಚಿನ ಸಂಚಾರ ಕೈಗೊಂಡ ರಾಜೇಂದ್ರ ಚೋಳನ್ – ರಾಜೇಂದ್ರ ಚೋಳನ್ ಮನವಿಗೆ ಸ್ಪಂದಿಸಿದ ಮಹಾರಾಷ್ಟ್ರ ಟೀಮ್…..

ಬೆಂಗಳೂರು

ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ಯಲ್ಲಿ  ವ್ಯತ್ಯಯ ಉಂಟಾಗಿದ್ದು ಮಳೆ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಗೆ ಉಷ್ಣ ವಿದ್ಯುತ್ ಸ್ಥಾವರಗಳನ್ನು ಹೆಚ್ಚು ಅವಲಂಬಿಸಬೇಕಿದೆ ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಕಲ್ಲಿದ್ದಲು ರೇಕ್‌ಗಳನ್ನು ಕಳುಹಿಸುವಂತೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಂದ್ರ ಚೋಳನ್ ಕೋರಿದರು

ಈ ಒಂದು ವಿಚಾರ ಕುರಿತಂತೆ ಮಹಾರಾಷ್ಟ್ರದ ನಾಗಪುರದಲ್ಲಿ
ವೆಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (WCL) ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ (CMD) ಡಾ. ಹೇಮಂತ್ ಶರತ್ ಪಾಂಡೆ ಅವರನ್ನು ಭೇಟಿಯಾಗಿ, ಕೆಪಿಸಿಎಲ್ ವತಿ ಯಿಂದ ನಿರ್ವಹಿಸಲಾಗುತ್ತಿರುವ ಆರ್‌ಟಿಪಿಎಸ್‌ಗೆ ಹೆಚ್ಚುವರಿ ಕಲ್ಲಿದ್ದಲು ರೇಕ್‌ಗಳನ್ನು ಒದಗಿಸುವಂತೆ ಮನವಿ ಮಾಡಿದರು.

 

ಮಳೆ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆಗೆ ಉಷ್ಣ ವಿದ್ಯುತ್ ಸ್ಥಾವರಗಳನ್ನು ಹೆಚ್ಚು ಅವಲಂಬಿಸಬೇಕಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಕಲ್ಲಿದ್ದಲು ರೇಕ್‌ಗಳನ್ನು ಕಳುಹಿಸುವಂತೆ ಕೋರ ಲಾಯಿತು.ಪ್ರತಿಯಾಗಿ ವೆಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (WCL) ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ (CMD) ಡಾ. ಹೇಮಂತ್ ಶರತ್ ಪಾಂಡೆ ಅವರು ಪ್ರತಿ ದಿನ ನೀಡುತ್ತಿರುವ 1 ಕೋಲ್ ರೇಕ್ ಜೊತೆಗೆ ಮತ್ತೊಂದು ಕೋಲ್ ರೇಕ್ ನೀಡಲು ಸಮ್ಮತಿಸಿದರು.

ಈ ವೇಳೆ ಕೆಪಿಸಿಎಲ್ ನ ಹಣಕಾಸು ನಿರ್ದೇಶಕರಾದ ಆರ್ ನಾಗರಾಜ, ತಾಂತ್ರಿಕ ನಿರ್ದೇಶಕರಾದ ಎಂ. ಆರ್. ಗಂಗಾಧರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.