ಧಾರವಾಡ –
ಕಾಲೇಜಿನಿಂದ ಮನೆಗೆ ಹೋಗಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ವಿದ್ಯಾರ್ಥಿನಿಗೆ ರಿವರ್ಸ್ ಬಂದ ಸಾರಿಗೆ ಬಸ್ ವೊಂದು ಡಿಕ್ಕಿ ಯಾಗಿ ವಿದ್ಯಾರ್ಥಿನಿ ಮೃತಪಟ್ಟಿದ್ದಳು ಕಳೆದ ಮೂರು ನಾಲ್ಕು ದಿನಗಳ ಹಿಂದೆ ಧಾರವಾಡದಲ್ಲಿ ಈ ಒಂದು ಘಟನೆ ನಡೆದಿತ್ತು ಪಿಯುಸಿ ಅಧ್ಯಯನ ಮಾಡುತ್ತಿದ್ದ ಧಾರವಾಡ ತಾಲ್ಲೂಕಿನ ಚಂದನಮಟ್ಟಿ ಗ್ರಾಮದ ಫಾತೀಮಾ ಜಹಗೀರದಾರ್ (17) ಸಾವನ್ನಪ್ಪಿದ ದುರ್ದೈವಿಯಾಗಿದ್ದಳು.

ಕಾಲೇಜು ಮುಗಿಸಿ ಮನೆಗೆ ಹೊಗಲು ಬಸ್ ಧಾರವಾಡ ಹಳೆ ಬಸ್ ನಿಲ್ದಾಣದಲ್ಲಿ ನಿಂತಿದ್ದಳು.ಇನ್ನೂ ಈ ಒಂದು ವಿಚಾರ ಗಮನಕ್ಕೆ ಬರುತ್ತಿದ್ದಂತೆ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಅವರು ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು
ಕುಟುಂಬದವರಿಗೆ ಸಾಂತ್ವನ ಹೇಳಿಸ ತವನಪ್ಪ ಅಷ್ಟಗಿ ಅವರು ವೈಯಕ್ತಿಕವಾಗಿ ಐವತ್ತು ಸಾವಿರ (50000) ಧನ ಸಹಾಯವನ್ನು ಮಾಡಿ ನೆರವಾದರು.ಇದರೊಂದಿಗೆ ಅಧಿಕಾರ ಇದ್ದರೂ ಇಲ್ಲದಿದ್ದರೂ ಜನ ಸೇವೆ ಹೇಗೆ ಮಾಡಬೇಕು ಎಂಬೊದನ್ನು ತೋರಿಸಿಕೊಟ್ಟರು ಸರಳತೆಯ ಸಾಹುಕಾರ್ ತವನಪ್ಪ ಅಷ್ಟಗಿ ಅವರು.ಇನ್ನೂ ಈ ಒಂದು ಸಂದರ್ಭದಲ್ಲಿ ವಿರೇಶ ಬ್ಯಾಹಟ್ಟಿ ಈರಣ್ಣ ಏಳ್ಳಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಹುಡೇದ ಸೈಯಪ ಶಿಖಾರಿ ಚಾಂದ್ ಹಾವೇರಿಪೇಠ ಆಮ್.ಎಮ್. ನದಾಫ ಹಾಗೂ ಗ್ರಾಮಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..



