ಧಾರವಾಡ –
ಹೆಂಡತಿ ಮಂಗಳ ಸೂತ್ರವನ್ನು ಒತ್ತೆಯಿಟ್ಟು ಬಿತ್ತನೆ ಮಾಡಿದ ರೈತನೊರ್ವ ಆತ್ಮಹತ್ಯೆಯನ್ನು ಧಾರವಾಡದ ಕಬ್ಬೆನೂರು ಗ್ರಾಮದಲ್ಲಿ ಮಾಡಿಕೊಂಡಿದ್ದನು.ಜಮೀನಿನಲ್ಲಿ ಬೆಳೆ ಒಣಗಿ ರೋದ್ರಿಂದ ಮನನೊಂದು ಆತ್ಮಹತ್ಯೆ ನಡೆದಿತ್ತು ಒತ್ತೆಯಿಟ್ಟ ಬಂಗಾರ ಬಿಡಿಸಿಕೊಳ್ಳಲಾಗದೆಂಬ ಭಯದಲ್ಲಿ ವೀರುಪಾಕ್ಷಪ್ಪ ನಾಗಮ್ಮನವರ (45) ಸಾವನ್ನಪ್ಪಿದ್ದರು
ಆತ್ಮಹತ್ಯೆ ಮಾಡಿಕೊಂಡ ಈ ಒಂದು ರೈತನ ಮನೆಗೆ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿ ಅವರು ಭೇಟಿ ನೀಡಿ ಸಾಂತ್ವನ ಹೇಳಿದರು ಪತ್ನಿಯ ಮೂರು ತೊಲೆ ಬಂಗಾರದ ಮಂಗಳಸೂತ್ರ, ಉಂಗುರವನ್ನು ಒತ್ತೆಯಿಟ್ಟು ಜಮೀನನ್ನು ಬಿತ್ತನೆ ಮಾಡಿದ್ದ ರೈತ 2.5 ಲಕ್ಷಕ್ಕೆ ಬಂಗಾರ ಒತ್ತೆಯಿಟ್ಟು ಆರು ಎಕರೆ ಬಿತ್ತಿದ್ದ ರೈತ ವೀರುಪಾಕ್ಷಪ್ಪ
ಹಾರೊಬೆಳವಡಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿಟ್ಟಿದ್ದ ರೈತ ವೀರುಪಾಕ್ಷಪ್ಪ ಆದರೆ ಮಳೆ ಕೈಕೊಟ್ಟಿದ್ರಿಂದ ಜಮೀನಿನಲ್ಲಿ ಒಣಗಿ ಹೋಗಿರುವ ಬೆಳೆ.ಆರು ಎಕರೆಯಲ್ಲಿ ಹೆಸರು ಉದ್ದು ಬಿತ್ತನೆ ಮಾಡಿದ್ದ ರೈತ ವೀರುಪಾಕ್ಷಪ್ಪ.ಬೆಳೆ ಸಾಲ, ಬಂಗಾರದ ಸಾಲ ಹಾಗೂ ಕೈಡ್ನದ ಸಾಲ ಸೇರಿ 10 ಲಕ್ಷ ಸಾಲ ಮಾಡಿದ್ದ ರೈತ

ಧಾರವಾಡ ತಾಲೂಕಿನ ಕಬ್ಬೇನೂರ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ ರೈತ ವಿರುಪಾಕ್ಷಪ್ಪ ನಾಗಮ್ಮನವರ ಅವರ ಮನೆಗೆ ಭೇಟಿ ನೀಡಿ ಕುಟುಂಬ ಸಾಂತ್ವನ ಹೇಳಿ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದರು ಅಲ್ಲದೇ ವೈಯಕ್ತಿಕವಾಗಿ ಇಪ್ಪತೈದು ಸಾವಿರ (25000) ಧನ ಸಹಾಯ ನೀಡಿದರು.
ಬರಗಾಲದ ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಬೇಕು ರೈತರು ಧೃತಿಗೆಡದೆ ಯಾವುದೇ ರೀತಿಯ ಜೀವಕ್ಕೆ ಆಪತ್ತು ತರುವ ನಿರ್ಣಯಗಳನ್ನು ತೆಗೆದುಕೊಳ್ಳಬಾರದು ಎಂದು ರೈತ ಬಾಂಧವರಲ್ಲಿ ಕಳಕಳಿಯ ವಿನಂತಿಯನ್ನು ಮಾಡಿದರು
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವಿ.ಎಸ್.ಪಾಟೀಲ ಮಾಜಿ ಉಪಮೇಯರ್ ಆಮ್.ಎಮ್ ನದಾಫ ವೀರೇಶ ಬ್ಯಾಹಟ್ಟಿ,ಈರಣ್ಣ ಏಳ್ಳಲಿ ಹಾಗೂ ಕಬ್ಬೇನೂರ ಗ್ರಾಮದ ಬಸವರಾಜ ಬೂದಿಹಾಳ ಶೇಖನ ಗೌಡ ಮುದಿಗೌಡ್ರ. ಗುರನಗೌಡ ಜನಗೌಡ್ರ. ಗಂಗನಗೌಡ ಮುದಿಗೌಡ್ರ. ರುದ್ರಗೌಡ ಪರ್ವತಗೌಡ್ರ ಇಮಾಮ. ನದಾಫ. ಸಿದ್ದನಗೌಡ ಶಿವನಗೌಡ್ರ ಉಮೇಶ್ ಕೆಂಗಾನೋರ ಬಾಪುಗೌಡ ಶಿವನಗೌಡ್ರ ಮಲ್ಲಿ ಕಾರ್ಜುನ ಮುತವಾಡ. ಮಲ್ಲಿಕಾರ್ಜುನಗೌಡ ಪರ್ವತಗೌಡ್ರ ಹಾಗೂ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..



