ಮಂಜುನಾಥ ಮಕ್ಕಳಗೇರಿ ಅಭಿಮಾನಿ ಬಳಗದಿಂದ ವಿದ್ಯಾರ್ಥಿಗಳಿಗಾಗಿ ರಕ್ತಹೀನತೆ ತಪಾಸನಾ ಶಿಬಿರ – ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿದ ಸರಳತೆಯ ಸಾಹುಕಾರ್ ಜನಸೇವಕ…..

Suddi Sante Desk
ಮಂಜುನಾಥ ಮಕ್ಕಳಗೇರಿ ಅಭಿಮಾನಿ ಬಳಗದಿಂದ ವಿದ್ಯಾರ್ಥಿಗಳಿಗಾಗಿ ರಕ್ತಹೀನತೆ ತಪಾಸನಾ ಶಿಬಿರ – ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿದ ಸರಳತೆಯ ಸಾಹುಕಾರ್ ಜನಸೇವಕ…..

ಧಾರವಾಡ

ಸದಾ ಒಂದಿಲ್ಲೊಂದು ರೀತಿಯಲ್ಲಿ ಕಾರ್ಯಕ್ರಮ ಮಾಡುವ ಮೂಲಕ ಜನ ಸೇವೆಯನ್ನು ಮಾಡುತ್ತಿರುವ ಧಾರವಾಡದ ಬಿಜೆಪಿ ಪಕ್ಷದ ಮುಖಂಡ ಸಮಾಜ ಸೇವಕ ಮಂಜುನಾಥ ಮಕ್ಕಳಗೇರಿ ಅವರ ಅಭಿಮಾನಿ ಬಳಗದಿಂದ ಮತ್ತೊಂದು ಅರ್ಥಪೂರ್ಣ ಕಾರ್ಯಕ್ರಮ ನಡೆಯಿತು

ಧಾರವಾಡದ ಕರ್ನಾಟಕ ಪ್ರೌಢ ಶಾಲೆಯಲ್ಲಿ ಮಂಜುನಾಥ ಮಕ್ಕಳಗೇರಿ ಅಭಿಮಾನಿ ಬಳಗದ ವತಿಯಿಂದ ವಿದ್ಯಾರ್ಥಿ ಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಉಚಿತ ಅನೀಮಿಯಾ (ರಕ್ತಹೀನತೆ) ತಪಾಸಣಾ ಶಿಬಿರವನ್ನು ಬಿಜೆಪಿ ಮುಖಂಡ ಮಂಜುನಾಥ ಮಕ್ಕಳಗೇರಿ ಉದ್ಘಾಟಿಸಿದರು.

ಈ ಉಚಿತ ಅನಿಮಿಯಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಮಂಜುನಾಥ‌ ಮಕ್ಕಳಗೇರಿ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ರೂಪಿಸುವುದು ಅತ್ಯಂತ ಅವಶ್ಯಕವಾಗಿದೆ. ಮನೆಯೇ ಮೊದಲ ಪಾಠಶಾಲೆ ಎನ್ನುವಂತೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ಮನೆಯಲ್ಲಿ ಪೋಷಕರನ್ನು ಹಾಗೂ ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಯಬೇಕು.

ಶಾಲೆಯಲ್ಲಿ ಶಿಕ್ಷಕರು ಕಂಡ ತಕ್ಷಣ ಅವರ ಪಾದ ಮುಟ್ಟಿ ನಮಸ್ಕರಿಸುವ ವಿಧೇಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಅವರು ಪ್ರಸ್ತುತ ದಿನಗಳಲ್ಲಿ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ರಕ್ತಹೀನತೆಯನ್ನು ತಡೆಗಟ್ಟಲು ಇಂತಹ ಉಚಿತ ಅನೀಮಿಯಾ ತಪಾಸಣಾ ಶಿಬಿರಗಳು ಸಹಕಾರಿಯಾ ಗಿವೆ. ತಪಾಸಣೆ ನಂತರ ವೈದ್ಯರು ನೀಡುವ ಕಬ್ಬಿಣಾಂಶದ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಬೇಕು. ಇದರೊಂದಿಗೆ ದೇಹಕ್ಕೆ ಹಾನಿಕಾರಕವಾದ ಜಂಕ್ ಫುಡ್ ಸೇವನೆಯನ್ನು ಸಂಪೂರ್ಣವಾಗಿ ತೊರೆದು, ಪೌಷ್ಟಿಕ ಹಾಗೂ ತಾಜಾ ಆಹಾರ ವನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರೌಢ ಶಾಲೆಯ ಮುಖ್ಯೋ ಪಾಧ್ಯಾಯರಾದ ಎನ್. ಎನ್. ಸವಣೂರ, ಶಿಕ್ಷಕರಾದ ರಮೇಶ ಮೂಲಿಮನಿ, ಪ್ರಕಾಶ, ವೈದ್ಯಕೀಯ ಸಿಬ್ಬಂದಿಗಳಾದ ಗಿರೀಜಾ ಹಿರೇಮಠ, ಸಾರಾ ಗೋಕಾವಿ, ಶಾಲೆಯ ಶಿಕ್ಷಕ ವೃಂದ ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳು ಹಾಗೂ ಮಂಜುನಾಥ ಮಕ್ಕಳಗೇರಿ ಅಭಿಮಾನಿಗಳದ ಸದಸ್ಯರು ಉಪಸ್ಥಿತರಿದ್ದರು.

 

ಪ್ರಮೋದ್ ಕಪಲಿ ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.