ದೀಪಾವಳಿಯಲ್ಲಿ ಯಾಕೆ ಮನೆಯಲ್ಲಿ ಪಾಂಡವರನ್ನಿಡುತ್ತಾರೆ ಗೋತ್ತಾ

Suddi Sante Desk

ಬೆಂಗಳೂರು –

ನಾಡಿನ ಪ್ರತಿಯೊಂದು ಹಬ್ಬ ಹರಿದಿನಗಳಿಗೆ ತನ್ನದೆಯಾದ ವೈಶಿಷ್ಟ್ಯವಿದೆ. ವಿವಿಧತೆಯಲ್ಲಿ ಏಕೆತಯನ್ನು ಹೊಂದಿರುವ ನಮ್ಮ ದೇಶದಲ್ಲಿನ ಪ್ರತಿಯೊಂದು ಹಬ್ಬ ಹರಿದಿನಗಳು ಆಚರಣೆಗಳು ಒಂದೊಂದು ಇತಿಹಾಸ ಸಂಪ್ರದಾಯವನ್ನು ಹೊಂದಿದ್ದು ಅನಾಧಿಕಾಲದಿಂದೂ ನಡೆದುಕೊಂಡು ಬಂದಿವೆ.ಇವೆಲ್ಲವುಗಳೂ ಈಗಷ್ಟೇ ಅಲ್ಲದೇ ಅದು ಪೂರ್ವ ಕಾಲದಿಂದಲೂ ನಡೆದು ಬಂದ ಸಂಪ್ರದಾಯವಾದರೂ ಅವುಗಳ ಆಚರಣೆಯಲ್ಲಿ ಒಂದೊಂದು ಧರ್ಮ ಜಾಗತಿಯ ಸಂದೇಶಗಳು ಅಡಗಿವೆ ಎನ್ನುವದಕ್ಕೆ ದೀಪಾವಳಿಯ ಪಾಡ್ಯದ ದಿನದಂದು ಸಗಣೆಯಿಂದ ಮಾಡಿ ಪೂಜಿಸುವ ಪಾಂಡವರು ಸಾಕ್ಸಿ. ಭಕ್ತಿ,ಭಾವದಿಂದ ಪೂಜೆಗೊಳ್ಳುತ್ತಿದೆ ಅದುವೇ ಪಾಂಡವರ ಪೂಜೆಗೆ ಸಾಕ್ಷಿ ಎನ್ನಬಹುದು

ಪ್ರತಿಷ್ಠಾಪನೆ ಮಹತ್ವ ದೀಪಾವಳಿಯ ಅಮವಾಸ್ಯೆಯ ರಾತ್ರಿಯಂದು ಸಕಲ ಭಾಗ್ಯಗಳನ್ನು ಕರುಣಿಸುವಂತೆ ಲಕ್ಷ್ಮೀ ಪೂಜೆ ಕೈಗೊಂಡು ಇಡೀ ರಾತ್ರಿ ಜಾಗರಣೆ,ಭಜನೆ, ಮನರಂಜನೆಗಳಿಂದ ಸೌಭಾಗ್ಯ ಲಕ್ಷ್ಮೀಯನ್ನು ಒಲಿಸಿಕೊಳ್ಳುವ ಮಹತ್ವದ ಉದ್ದೇಶದಿಂದ ನಾನಾ ತರಹದ ಪೂಜೆಗಳನ್ನು ಮಾಡುವುದು ಸಂಪ್ರದಾಯವಾಗಿದೆ. ಬಲಿಪಾಡ್ಯದ ದಿವಸ ಬೆಳಗ್ಗೆ ಸಗಣಿಯಿಂದ ಪಾಂಡವರ ಮೂರ್ತಿಗಳನ್ನು ಮನೆಯ ತುಂಬೆಲ್ಲಾ ಮಾಡಿ ಅವುಗಳಿಗೆ ಪೂಜಿಸಿ ಹೂ ಮತ್ತು ಉತ್ರಾಣಿ ಕಡ್ಡಿಗಳನ್ನು ಹಾಕಿ ನಂತರ ಶೃಂಗಾರ ಮಾಡಿ ಮಹಿಳೆಯರು ಅವುಗಳಿಗೆ ಶ್ಯಾವಿಗೆ ಪಾಯಸ ನೈವೇದ್ಯ ಮಾಡಿ ಪೂಜೆಯನ್ನು ಸಲ್ಲಿಸುವುದು ಈ ಹಬ್ಬದ ಮಹತ್ವವಾಗಿದೆ.

ಯಾಕೇ ಮನೆಯಲ್ಲಿ ಪ್ರತಿಸ್ಪಾಪನೆ ಮಾಡುತ್ತಾರೆ

ಇದಕ್ಕೆ ದೊಡ್ಡದಾದ ಒಂದು ಧಾರ್ಮಿಕ ಹಿನ್ನಲೆ ಇದೆ ಭೂಲೋಕಕ್ಕೆ ಕಂಟಕ ಪ್ರಾಯವಾಗಿದ್ದ ಜನತೆಯನ್ನು ಕಷ್ಟದ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದ ರಾಕ್ಷಸನನ್ನು ವಿಷ್ಣು ದೇವನು ಸಂಹರಿಸಿದನಂತೆ ಇದರ ಸವಿನೆನಪಿಗಾಗಿ ದೀಪಾವಳಿಯ ಅಮವಾಸ್ಯೆಯ ಪಾಡ್ಯದ ದಿವಸ ಪಾಂಡವರ ಮೂರ್ತಿಯನ್ನು ಮಾಡಿ ಪೂಜಿಸುವುದು ಧಾರ್ಮಿಕ ಹಿನ್ನಲೆಯಾಗಿದೆ.

ಪಾಂಡವರ ಅಲಂಕಾರ ಒಂದು ವೈಶಿಷ್ಠ್ಯ ದೀಪಾವಳಿ ಅಮವಾಸ್ಯೆಯ ಮರು ದಿವಸ ಪಾಡ್ಯದಂದು ಬೆಳಗ್ಗೆ ಸಗಣಿಯಿಂದ ಪಾಂಡವರು ಎಂದು ಐದು ಮೂರ್ತಿಗಳನ್ನು ಮಾಡಿ ಅದಕ್ಕೆ ಉತ್ತಾರಣಿ ಕಡ್ಡಿ, ಹೊನ್ನಬರಗಿ ಹೂ, ಅಣ್ಣಿ ಹೂ, ಸೇರಿದಂತೆ ವಿವಿಧ ರೀತಿಯ ಹೂಗಳಿಂದ ಅಲಂಕಾರ ಮಾಡುತ್ತಾರೆ ಅಲ್ಲದೇ ಸುಣ್ಣದಿಂದ ಪಾಂಡವರು ಬರುವ ದಾರಿಗೆ ಸಣ್ಣ ಸಣ್ಣ ಹೆಜ್ಜೆಗಳನ್ನು ಮನೆಯ ಬಾಗಿಲು ಒಳಗೆ ಗುರುತು ಸಹ ಮಾಡಿ ಭಕ್ತಿಯಿಂದ ಪೂಜೆ ಸಲ್ಲಿಸುವುದು ಒಂದು ವೈಶಿಷ್ಠ್ಯವಾಗಿದೆ.

ಏನಿದು ಪಾಂಡವರ ಪೂಜೆ

ಆಕಳು(ಗೋಮಾತೆ) ಸಗಣಿಯಿಂದ ನಂದಾ, ಭದ್ರಾ, ಸುಗುಣ, ಶಶಿಲಾ, ಸುರಭಿ, ಎನ್ನುವ ಗೋವುಗಳು ಶಿವನಲ್ಲಿ ನಾವು ಭೂಲೋಕಕ್ಕೆ ಬರುತ್ತೇವೆ ನಮ್ಮನ್ನು ಕೂಡಾ ಪೂಜೆಗೊಳ್ಳುವಂತೆ ವರ ನೀಡಿ ಎಂದಾಗ ಶಿವನು ಬಲಿಪಾಡ್ಯಯ ದಿನದಂದು ಆ ಐದು ಗೋವುಗಳ ಪೂಜೆಯ ಸಂಕೇತವಾಗಿ ಈ ಮೂರ್ತಿಗಳನ್ನು ತಯಾರಿಸುತ್ತಾರೆ.ಇವುಗಳಿಗೆ ವಿವಿಧ ತರಹದ ಹೂಗಳಿಂದ ಅಲಂಕಾರ ಮಾಡಿ ಪೂಜಿಸುತ್ತಾರೆ. ಇದನ್ನು ವಿಷ್ಣುವು ನಂದ ರಾಕ್ಷಸನನ್ನು ಕೊಂದ ನೆನಪಿಗಾಗಿ ದೀಪಾವಳಿಯ ಪಾಡ್ಯದ ದಿವಸ ಪಾಂಡವರನ್ನು ಪ್ರತಿಷ್ಠಾಪಿಸುವುದು ಹಿಂದಿನಿಂದ ನಡೆದುಕೊಂಡ ಬಂದ ಸಂಪ್ರಾದಾಯವಾಗಿದೆ.

ದನದ ಕೊಟ್ಟಿಗೆಯಲ್ಲಿ ಪೂಜೆ ನಾಡಿನ ರೈತ ಕುಟುಂಬಗಳಲ್ಲಿ ಜಾನುವಾರುಗಳ ಕೊಟ್ಟಿಗೆಗೆ ಪೂಜ್ಯನೀಯ ಸ್ಥಾನದ ಜೊತೆಗೆ ಅಪಾರ ಗೌರವ ಇದೆ. ದನದ ಕೊಟ್ಟಿಗೆಯಲ್ಲಿ ಲಕ್ಷ್ಮೀಯ ಗೂಡು ಇರುವುದು ಕಡ್ಡಾಯವಾಗಿದೆ. ಇದರ ಉದ್ದೇಶ ಕೊಟ್ಟಗೆಯಲ್ಲಿರುವ ಗೋವುಗಳ ಜೊತೆಗೆ ಲಕ್ಷ್ಮೀ ವಾಸವಾಗಿರುತ್ತಾಳೆ ಎನ್ನುವುದು ಒಂದು ನಂಬಿಕೆ. ಆದ್ದರಿಂದ ರೈತರ ದನಕರುಗಳಿಗೆ ಏನಾದರೂ ಆಪತ್ತು ಬಂದರೆ ಲಕ್ಷ್ಮೀ ಪೂಜೆಯನ್ನು ಮಾಡುವುದು ನಂದಾ ದೀಪವನ್ನು ಬೆಳಗಿಸುವುದು ಇಂದಿಗೂ ನಡೆದು ಬಂದ ಸಂಪ್ರದಾಯವಾಗಿದೆ.

ನಾಡಿನ ಎಲ್ಲಡೆ ಆಚರಿಸುತ್ತಿರುವ ಪ್ರತಿ ಹಬ್ಬಗಳಲ್ಲಿ ಒಂದೊಂದು ವಸ್ತು ಪೂಜೆಗೊಳ್ಳುತ್ತವೆ. ಎಲ್ಲವು ಮಾನವನ ಜೀವನಕ್ಕೆ ಹತ್ತಿರವಾದುದು ಎನ್ನುವುದಕ್ಕೆ ಸಗಣಿಯಿಂದ ತಯಾರಾದ ಈ ಪಾಂಡವ ಮೂರ್ತಿಗಳೇ ಸಾಕ್ಷಿ. ಪೂರ್ವದಿಂದಲೂ ಸಗಣಿ ರೈತನಿಗೆ ಅನ್ನ ನೀಡುವ ಸಂಜೀವಿನಿ ಕೂಡಾ ಹೌದು. ಎನ್ನಲು ಇದೊಂದು ಅತ್ಯುತ್ತಮ ನಿದರ್ಶನ.

ಅಜ್ಞಾನವೆಂಬ ಕತ್ತಲನ್ನು ಹೊಡೆದೂಡಿಸಿ ಜ್ಞಾನವೆಂಬ ದೀವಿಗೆ ಬೆಳಗಿಸು ಎಂದು ಬೆಳಕಿನ ಹಬ್ಬದಂದು ದೇವರಿಗೆ ಮೊರೆ ಇಡುವುದೇ ದೀಪಾವಳಿ. ನಾಡಿನ ಪ್ರತಿಯೊಂದು ಹಬ್ಬಕ್ಕೂ ತನ್ನದೇಯಾದ ವೈಶಿಷ್ಠ್ಯವಿದೆ. ಪೂರ್ವಜರ ಕಾಲದಿಂದಲೂ ನಡೆದು ಬಂದ ಸಂಪ್ರದಾಯವಾದರೂ ಅವುಗಳ ಆಚರಣೆಯಲ್ಲಿ ಒಂದೊಂದು ಧರ್ಮ ಜಾಗತಿಯ ಸಂದೇಶಗಳು ಸೇರಿಕೊಂಡಿವೆ. ಇವುಗಳಲ್ಲಿ ದೀಪಾವಳಿ ಪಾಡ್ಯದ ದಿನದಂದು ಸಗಣಿಯು ಭಕ್ತಿ-ಭಾವದಿಂದ ಪೂಜೆಗೊಳ್ಳುತ್ತದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.