ಶಿವಮೊಗ್ಗ –
ಜೋಗ ಫಾಲ್ಸ್ ಗೆ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದ್ದು ಹೀಗಾಗಿ ಪರ್ಯಾಯ ರಸ್ತೆ ಮಾರ್ಗವನ್ನು ಕಲ್ಪಿಸಲಾಗಿದೆ ಹೌದು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಗೇರುಸೊಪ್ಪ ಸೂಳೆಮುರ್ಕಿ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಕುಸಿದಿದೆ.
ಹೀಗಾಗಿ ಸುರಕ್ಷತೆಯ ದೃಷ್ಟಿಯಿಂದ ಗೇರುಸೊಪ್ಪ ಗ್ರಾಮ ದಿಂದ ಸಿದ್ದಾಪುರ ತಾಲ್ಲೂಕಿನ ಮಾವಿನಗುಂಡಿ ಗ್ರಾಮದ ವರೆಗೆ ರಸ್ತೆ ಸಂಚಾರ ನಿಷೇಧಿಸಲಾಗಿದೆ.
ಹೊನ್ನಾವರದಿಂದ ಸಿದ್ದಾಪುರ,ಜೋಗ,ಸಾಗರ ಕಡೆಗೆ ಹೋಗುವ ವಾಹನಗಳು ಹೊನ್ನಾವರ,ಕುಮಟಾ, ಸಂತೆ ಗುಳಿ ಮಾರ್ಗವಾಗಿ ಸಿದ್ದಾಪುರ ತಲುಪುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.ದಯಮಾಡಿ ಜೋಗ ಜಲಪಾತ ಕ್ಕೆ ಹೋಗುವ ಮುನ್ನ ಈ ಒಂದು ಮಾಹಿತಿ ಸೂಚನೆ ಗಮನಿಸಿ.
ಪಿ ಹೆಚ್ ಚಕ್ರವರ್ತಿ ಹಿರಿಯ ವರದಿಗಾರರು ಸುದ್ದಿ ಸಂತೆ