ದಾವಣಗೆರೆ-
ಹೇಗಾದರೂ ಮಾಡಿ ನಾನು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಗ್ರಾಮ ಪಂಚಾಯತ ಮೆಂಬರ್ ಆಗಬೇಕು ಅಭಿವೃದ್ದಿ ಮಾಡಿ ಜನರ ಸೇವೆ ಮಾಡಬೇಕು ಹೀಗೆ ಅಂದುಕೊಂಡು ಹದಿನೈದು ದಿನಗಳಿಂದ ಎಲ್ಲಾ ಸಿದ್ದತೆಯನ್ನು ಮಾಡಿಕೊಂಡು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದರು.

ನಾಮಪತ್ರ ಸಲ್ಲಿಸಿ ಚಿಹ್ನೆಯನ್ನು ಪಡೆದುಕೊಂಡು ಪ್ರಚಾರದ ಸಿದ್ದತೆಯನ್ನು ಮಾಡಿಕೊಂಡಿದ್ದರು ಇಷ್ಟೇಲ್ಲ ಮಾಡಿಕೊಂಡು ಪ್ರಚಾರ ಹೇಗೆ ಮಾಡಬೇಕು ಹೇಗೆ ಮತದಾರರನ್ನು ಸೆಳೆಯಬೇಕು ಹೀಗೆ ಪ್ಲಾನ್ ಮಾಡಿಕೊಂಡಿದ್ದ ಗ್ರಾಪಂ ಚುನಾವಣಾ ಅಭ್ಯರ್ಥಿಯೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.ಹೌದು ದಾವಣಗೇರಿಯ ದೊಡ್ಡಬಾತಿ ಗ್ರಾಮದ 4ನೇ ವಾರ್ಡ್ ಸಾಮಾನ್ಯ ಕ್ಷೇತ್ರದ ಉಮೇದುವಾರ ರಂಗಸ್ವಾಮಿ (48) ಸಾವಿಗೀಡಾದ ಮೃತ ದುರ್ದೈವಿಯಾಗಿದ್ದಾರೆ. ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ದೊಡ್ಡಬಾತಿ ಗ್ರಾಪಂ ಚುನಾವಣಾಧಿಕಾರಿ ಬಸವರಾಜ್ ಮಾಹಿತಿ ನೀಡಿದ್ದಾರೆ.

ಇನ್ನೂ ಕಣದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದ ಇವರು ನಿಧನರಾಗಿದ್ದು ಇನ್ನೂ ಈ ಒಂದು ವಾರ್ಡ್ ಗೆ ಚುನಾವಣೆ ಮಾಡ್ತಾರಾ ಇಲ್ಲವೇ ಬೇರೆ ದಿನಾಂಕ ಘೋಷಣೆ ಮಾಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆ ಚುನಾವಣೆಗೆ ನಿಲ್ಲಬೇಕು ಎಂದುಕೊಂಡು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದ ಅಭ್ಯರ್ಥಿಯೊಬ್ಬರ ಸಾವು ನಿಜಕ್ಕೂ ವಿಷಾದದ ಸಂಗತಿ.