ಹಾಸನ –
ಹೌದು ಇದಕ್ಕೆ ಸೋಮೇಶ್ ಶಿಕ್ಷಕರೇ ಸಾಕ್ಷಿ ಯಾಗಿದ್ದಾರೆ ಬಡತನದಲ್ಲಿ ಹುಟ್ಟಿ ಬೆಳೆದ ಅವರು ಓದಿದ್ದು ಸರ್ಕಾರಿ ಶಾಲೆಯಲ್ಲಿ ಕಷ್ಟಪಟ್ಟು ಓದಿದ ಬಳಿಕ ತಾವು ಓದಿದ ಶಾಲೆ ಯಲ್ಲೇ ಶಿಕ್ಷಕರಾಗ್ತಾರೆ ತಮಗೆ ಎದುರಾದ ಪರಿಸ್ಥಿತಿ ಬೇರೆ ಮಕ್ಕಳಿಗೆ ಬರಬಾರದು ಎಂದು ಸರ್ಕಾರಿ ಶಾಲೆಗಳನ್ನ ಮಾದರಿ ಶಾಲೆಗಳನ್ನಾಗಿ ಮಾಡಿದ್ದಾರೆ.
ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಪಣ ತೊಡುತ್ತಾರೆ ಪಠ್ಯ ಕಲಿಕೆಯಿಂದ ರಂಗಮಂದಿರದವರೆಗೆಊಟದ ತಟ್ಟೆಯಿಂದ ಚೊಕ್ಕ ಅಡುಗೆಮನೆಯವರೆಗೆ ಮಕ್ಕಳ ಸಮವಸ್ತ್ರದಿಂದ ಕ್ರೀಡಾಕೂಟದವರೆಗೆ ಹಾಸನ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳು ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವಂತೆ ಮಾಡಿದ್ದಾರೆ
ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಇವರ ಪಾತ್ರ ಪ್ರಮುಖವಾಗಿದೆ ಯಾವ ಖಾಸಗಿ ಶಾಲೆಗೂ ಕಮ್ಮಿಯಿಲ್ಲ ದಂತೆ ಸರ್ಕಾರಿ ಶಾಲೆಗಳಲ್ಲಿ ಬದಲಾವಣೆ ತಂದಿದ್ದಾರೆ ಶಿಕ್ಷಣ ಕ್ಷೇತ್ರಕ್ಕೆ ಶಕ್ತಿ ಮೀರಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಹಾಗೂ ಸಾಧಕ ಸೋಮೇಶ್ ಅವರೇ ಇಂದು ರಾಜ್ಯದಲ್ಲಿ ಮಾದರಿ ಸರ್ಕಾರಿ ಶಾಲಾ ಶಿಕ್ಷಕರಾಗಿ ನಮ್ಮ ಮುಂದೆ ಇದ್ದಾರೆ.