ನಾಗರಹಾಳ –
ಹೌದು ಲಿಂಗಸೂರಿನ ಸಮೀಪದ ತೊಂಡಿಹಾಳ ಗ್ರಾಮ ದಲ್ಲಿ ನಿರ್ಮಿಸಲಾಗುತ್ತಿರುವ ಮೂರು ಶಾಲಾ ಕೊಠಡಿಗಳ ಕಾಮಗಾರಿಯನ್ನು ಹಟ್ಟಿ ಕಂಪನಿ ನಿಗಮ ಮಂಡಳಿ ಅಧ್ಯಕ್ಷ ಮಾನಪ್ಪ ವಜ್ಜಲ್ ವೀಕ್ಷಣೆ ಮಾಡಿದರು.2018-19ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆಯ 45 ಲಕ್ಷಗಳ ವೆಚ್ಚದ ಕೊಠಡಿಗಳು ಕಳಪೆಯಾಗಿದ್ದು ಅವುಗಳನ್ನು ವೀಕ್ಷಣೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.ಕೊಠಡಿ ನಿರ್ಮಾಣ ಹಂತದಲ್ಲಿ ಮೆಟ್ಟಲು ಕಟ್ಟಡ ಮುರಿದು ಬಿದ್ದಿದೆ. ಕೊಠಡಿಯಲ್ಲಿ ಬಂಡಿ ಹಾಸಿಲ್ಲ ಕೊಠಡಿ ನಿರ್ಮಾಣ ಮಾಡುವಾಗ ಸರಿಯಾಗಿ ಬುನಾದಿ ಹಾಕಿಲ್ಲ ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟದ ಸಿಮೆಂಟ್ ಮರಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಬಳಕೆ ಮಾಡಿಲ್ಲ. ಮಳೆಗಾಲದಲ್ಲಿ ಶಾಲೆ ಸೋರುತ್ತಿದೆ ಎಂದು ಮಾನಪ್ಪ ವಜ್ಜಲ್ ಆರೋಪಿಸಿದರು.
ಈ ಕಟ್ಟಡ ಕಾಮಗಾರಿಯನ್ನು ಭೂಸೇನಾ ನಿಗಮ ದವರಿಗೆ ಗುತ್ತಿಗೆ ನೀಡಲಾಗಿದೆ.ಆದರೆ ಲಿಂಗಸುಗೂರು ಶಾಸಕ ಹೂಲಗೇರಿ ಅಣತಿಯಂತೆ ತಮ್ಮ ಹಿಂಬಾಲಕರಿಗೆ ನೀಡಿ ದ್ದಾರೆ.ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು.ಈ ಕಳಪೆ ಕಾಮಗಾರಿ ಕುರಿತು ಸಂಬಂಧಿಸಿದ ಅಧಿಕಾರಿಗಳ ಹಾಗೂ ಸರಕಾರದ ಗಮನಕ್ಕೆ ತರುತ್ತೇನೆ ಎಂದರು.
ಗ್ರಾಮಸ್ಥರಾದ ಬೈಲಪ್ಪ,ಬಸಪ್ಪ, ಹನುಮೇಶ ಗೌಂಡಿ, ರಾಮಣ್ಣ,ಹುಲ್ಲೇಶ ಸಾಹುಕಾರ,ಅಮರೇಶ ಕಡಿ, ಮುದಕಪ್ಪ ನಾಯಕ,ರವಿ ಗೌಡ,ಗೋವಿಂದ ನಾಯಕ ಇದ್ದರು.