This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

National News

ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ – ಶೀಘ್ರದಲ್ಲೇ ಮತ್ತೆ ಹೆಚ್ಚಾಗಲಿದೆ ತುಟ್ಟಿಭತ್ಯೆ ಹೊರಬೀಳಲಿದೆ ಅಧಿಕೃತ ಆದೇಶ

WhatsApp Group Join Now
Telegram Group Join Now

ನವದೆಹಲಿ –

ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ನೌಕರರು ದೀರ್ಘಕಾಲದಿಂದ ಡಿಎ ಹೆಚ್ಚಳಕ್ಕೆ ಒತ್ತಾಯಿಸುತ್ತಿದ್ದಾರೆ.ಸಧ್ಯ ಅವರಿಗೆ ಒಳ್ಳೆಯ ಸುದ್ದಿ ಸಿಕ್ಕಿದ್ದು ಕೇಂದ್ರ ಸರ್ಕಾರವು ಶೀಘ್ರದಲ್ಲೇ ನೌಕರರ ತುಟ್ಟಿಭತ್ಯೆ ಅಥವಾ ಡಿಎ ಹೆಚ್ಚಳವನ್ನ ಘೋಷಿಸಲಿದ್ದು ಕೇಂದ್ರ ನೌಕರರ ವೇತನ ಹೆಚ್ಚಳವಾಗಲಿದೆ.

ಡಿಎ 4%ರಷ್ಟು ಹೆಚ್ಚಳ
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನ ಶೇಕಡಾ 4ರಷ್ಟು ಹೆಚ್ಚಿಸಲು ಮೇ ತಿಂಗಳಲ್ಲಿ ಗ್ರಾಹಕ ಹಣದುಬ್ಬರ ದತ್ತಾಂಶವು ನಿರ್ಧರಿಸಿದೆ.ಆದಾಗ್ಯೂ ಜೂನ್ ತಿಂಗಳ ಗ್ರಾಹಕ ಹಣದುಬ್ಬರ ಅಂಕಿಅಂಶಗಳು ಇನ್ನೂ ಬಂದಿಲ್ಲ. ಜುಲೈ 31ರಂದು ದತ್ತಾಂಶವನ್ನು ಬಿಡುಗಡೆ ಮಾಡಲಾಗಿದ್ದು ಇದರ ನಂತರ ತುಟ್ಟಿಭತ್ಯೆಯಲ್ಲಿನ ಒಟ್ಟು ಹೆಚ್ಚಳವು ಎಷ್ಟು ಎಂದು ನಿರ್ಧರಿಸಲಾಗುತ್ತದೆ.

ಅಂದ್ಹಾಗೆ ಕೇಂದ್ರ ನೌಕರರ ತುಟ್ಟಿಭತ್ಯೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಸಂಬಂಧಿಸಿದ್ದು ಈ ಸಂಖ್ಯೆ ನಿರಂತರವಾಗಿ ಹೆಚ್ಚಾದರೆ ಅದಕ್ಕೆ ಅನುಗುಣವಾಗಿ ತುಟ್ಟಿ ಭತ್ಯೆಯನ್ನ ಸಹ ಹೆಚ್ಚಿಸಲಾಗುತ್ತದೆ.ಮೊದಲಾರ್ಧದಲ್ಲಿ ಐದು ತಿಂಗಳ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾ ಗಿದೆ ಜೂನ್ ತಿಂಗಳ ಅಂಕಿಅಂಶಗಳು ಇನ್ನೂ ಬರಬೇಕಾ ಗಿದೆ.ಅಂತೆಯೇ ಜೂನ್‌ನಲ್ಲಿ ಈ ಸಂಖ್ಯೆ 130ಕ್ಕೆ ತಲುಪ ಲಿದೆ ಎಂದು ತಜ್ಞರು ನಂಬಿದ್ದಾರೆ.ಇದು ಕೇಂದ್ರ ನೌಕರರ ತುಟ್ಟಿಭತ್ಯೆಯಲ್ಲಿ ಶೇಕಡಾ 4ರಷ್ಟು ಹೆಚ್ಚಳಕ್ಕೆ ದಾರಿ ಮಾಡಿ ಕೊಡುತ್ತದೆ.ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ)ಮೇ ತಿಂಗಳಲ್ಲಿ 129 ಅಂಶಗಳಷ್ಟಿತ್ತು. ಮುಂಬ ರುವ ದಿನಗಳಲ್ಲಿ ತುಟ್ಟಿಭತ್ಯೆ ಶೇಕಡಾ 4ರ ದರದಲ್ಲಿ ಹೆಚ್ಚಾ ಗುವುದು ಖಚಿತವಾಗಿದೆ.

ಡಿಎ ತುಂಬಾ ಹೆಚ್ಚಾಗುತ್ತದೆ
ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇಕಡಾ 4ರಷ್ಟು ಹೆಚ್ಚಿಸಿದರೆ ಅವರ ಡಿಎ ಶೇಕಡಾ 38ಕ್ಕೆ ಏರುತ್ತದೆ.ಪ್ರಸ್ತುತ ಡಿಎಯನ್ನು ಕೇಂದ್ರ ನೌಕರರಿಗೆ ಶೇಕಡಾ 34ರ ದರದಲ್ಲಿ ನೀಡಲಾಗುತ್ತಿದೆ.

ನೀವು 7ನೇ ವೇತನ ಆಯೋಗದ ಅಡಿಯಲ್ಲಿ ಕನಿಷ್ಠ 18,000 ರೂ.ಗಳ ಮೂಲ ವೇತನವನ್ನು ನೋಡಿದರೆ, ವಾರ್ಷಿಕ ತುಟ್ಟಿಭತ್ಯೆ ಶೇಕಡಾ 38ರ ದರದಲ್ಲಿ ಒಟ್ಟು 6,840 ರೂ.ಗಳಷ್ಟು ಹೆಚ್ಚಾಗುತ್ತದೆ.ಅಂದರೆಈಗಿರುವ ತುಟ್ಟಿಭತ್ಯೆಗೆ ಹೋಲಿಸಿದರೆ ಪ್ರತಿ ವರ್ಷ ತುಟ್ಟಿಭತ್ಯೆಯಲ್ಲಿ 720 ರೂ.ಗಳ ಹೆಚ್ಚಳವಾಗಲಿದೆ.ಒಟ್ಟಾರೆಯಾಗಿ 18,000 ರೂ.ಗಳ ಮೂಲ ವೇತನವನ್ನು ಹೊಂದಿರುವ ಕೇಂದ್ರ ನೌಕರರು ವಾರ್ಷಿಕ 8,640 ರೂ.ಗಳ ಹೆಚ್ಚಿನ ತುಟ್ಟಿಭತ್ಯೆಯನ್ನು ಪಡೆಯುತ್ತಾರೆ.


Google News

 

 

WhatsApp Group Join Now
Telegram Group Join Now
Suddi Sante Desk