ದಾವಣಗೆರೆ –
ರಾಜ್ಯದ ವಿವಿಧೆಡೆ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ಕಟ್ಟಡಗಳುಶಿಥಿಲಗೊಂಡಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಈಚೆಗೆ ಆದೇಶಿಸಿದೆ.
ಕಟ್ಟಡಗಳ ದುರಸ್ತಿಗೆ ಮಳೆಗಾಲಕ್ಕೆ ಮೊದಲೇ ಕ್ರಮ ಕೈಗೊಳ್ಳದೆ ಈಗ ರಜೆ ನೀಡಲು ಆದೇಶಿಸಿರುವುದು ಶಾಲೆಗಳ ಗುಣಮಟ್ಟ ಸುಧಾರಿಸುವಲ್ಲಿ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಗಳು ದೂರಿವೆ.
ಶಿಥಿಲಗೊಂಡಿರುವ ಸರ್ಕಾರಿ ಶಾಲಾ ಕೊಠಡಿ ಕಟ್ಟಡ (ಶೌಚಾಲಯ ಸೇರಿ)ಗಳನ್ನು ಗುರುತಿಸಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು.ಶಾಲಾ ಕೊಠಡಿ,ಆವರಣದಲ್ಲಿ ಮಳೆ ನೀರು ನಿಲ್ಲುವಂತಿದ್ದರೆ ಪೂರ್ವಾನುಮತಿ ಪಡೆದು ಶಾಲೆಗಳಿಗೆ ರಜೆ ಘೋಷಿಸಬೇಕು.ಇದಕ್ಕೆ ತಪ್ಪಿದಲ್ಲಿ ಮುಂದೆ ಸಂಭವಿಸುವ ಅನಾಹುತಗಳಿಗೆ ಕ್ಷೇತ್ರ ಶಿಕ್ಷಣಾ ಧಿಕಾರಿ ಹಾಗೂ ಮುಖ್ಯ ಶಿಕ್ಷಕರನ್ನೇ ಹೊಣೆ ಮಾಡಲಾಗು ವುದು ಎಂದು ಆದೇಶದಲ್ಲಿ ಎಚ್ಚರಿಸಲಾಗಿದೆ.
ಇನ್ನೂ ಶಾಲೆಗಳಿಗೆ ಮೂಲಸೌಕರ್ಯಗಳನ್ನು ಕಾಲಮಿತಿ ಯಲ್ಲಿ ಒದಗಿಸುವುದು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್-8ರ ಅನ್ವಯ ರಾಜ್ಯ ಸರ್ಕಾರದ ಜವಾಬ್ದಾರಿ.ಇದನ್ನು ಶಿಕ್ಷಕರು ಅಥವಾ ಎಸ್‌ಡಿಎಂಸಿಗಳಿಗೆ ವರ್ಗಾಯಿಸುವುದು ತಪ್ಪು ಎಂದು ಎಸ್‌ಡಿಎಂಸಿ ಸಮನ್ವಯ ವೇದಿಕೆ ಮಹಾಪೋಷಕ ಪ್ರೊ.ವಿ.ಪಿ. ನಿರಂಜನಾರಾಧ್ಯ ದೂರಿದ್ದಾರೆ.
ಕಾಯ್ದೆ ಪ್ರಕಾರ ಶಾಲೆಗಳಿಗೆ 2013ರಲ್ಲೇ ಶೇ 100ರಷ್ಟು ಸೌಕರ್ಯ ಲಭ್ಯವಿರಬೇಕಿತ್ತು.ಕಾಯ್ದೆ ಜಾರಿಯಾಗಿ 12 ವರ್ಷ ಕಳೆದರೂ ರಾಜ್ಯದಲ್ಲಿ ಸೌಲಭ್ಯ ಹೊಂದಿರುವ ಶಾಲೆ ಗಳ ಸಂಖ್ಯೆ ಕೇವಲ ಶೇ 23.6ರಷ್ಟು. ಉಳಿದ ಶೇ 76.4 ರಷ್ಟು ಶಾಲೆಗಳಲ್ಲಿ ಸೌಲಭ್ಯಗಳು ಇಲ್ಲವೆಂದು ಕೇಂದ್ರ ಶಿಕ್ಷಣ ಸಚಿವರೇ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.