ದಾವಣಗೆರೆ –
ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ವನ್ನು ಬಿಜೆಪಿ ಸರ್ಕಾರ ಶೀಘ್ರ ರಚನೆ ಮಾಡಲಿದೆ ಎಂದು ರಾಜ್ಯ ಸರ್ಕಾರದ ಮುಖ್ಯಸಚೇತಕ ವೈ.ಎ. ನಾರಾಯಣ ಸ್ವಾಮಿ ಹೇಳಿದರು.ನಗರದ ಸರ್ಕಾರಿ ನೌಕರರ ಸಮು ದಾಯ ಮಂದಿರದಲ್ಲಿ ಹಮ್ಮಿಕೊಂಡಿದ್ದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ನಿರ್ದೇಶಕರು ಮತ್ತು ಪದಾಧಿಕಾ ರಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ದರು.
ಕೇಂದ್ರ ಮಾದರಿ ವೇತನವನ್ನು ರಾಜ್ಯದಲ್ಲಿ ಜಾರಿ ಮಾಡ ಲಾಗುವುದು.ಶೀಘ್ರದಲ್ಲಿ ಶಿಕ್ಷಕರ ಸಮಸ್ಯೆ ಬಗೆಹರಿಯ ಲಿದೆ. ವಿದ್ಯಾವಂತರೇ ಶಿಕ್ಷಣ ಸಚಿವರಾಗಿರುವುದರಿಂದ ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಸಮಸ್ಯೆಗಳು ಬೇಗ ಬಗೆ ಹರಿಯಲಿದೆ.ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸರ್ಕಾರ ಇರುವಾಗ ಶಿಕ್ಷಣ ಸಚಿವರಿಗೂ ಇಲಾಖೆಗೆ ಸಾಮ್ಯತೆ ಇರಲಿಲ್ಲ ಎಂದು ಟೀಕಿಸಿದರು.
ಶಿಕ್ಷಣವು ಸಮಾಜದಲ್ಲಿ ಸಮಾನತೆ ತರುತ್ತದೆ.ಅಂತಹ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನೂತನ ನಿರ್ದೇಶಕರು ಉತ್ತಮವಾಗಿ ಕಾರ್ಯನಿರ್ವಹಿಸ ಬೇಕು ಎಂದು ಸಲಹೆ ನೀಡಿದರು.ದೇಶಕ್ಕೆ ಶಿಕ್ಷಕರ ಕೊಡುಗೆ ಅಪಾರವಾದುದು.ಬೇರೆ ಯಾವುದೇ ಕ್ಷೇತ್ರವು ಇಂಥ ಕೊಡುಗೆಯನ್ನು ನೀಡಲು ಸಾಧ್ಯವಿಲ್ಲ.ದೇಶವನ್ನು ಹೊಸ ದಿಕ್ಕಿನತ್ತ ಒಯ್ಯಲು ಪ್ರಧಾನಿ ಮೋದಿ ಅವರು ಜಾರಿಗೆ ತಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳೋಣ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ತಿಳಿಸಿದರು.
ಅನುದಾನಿತ ಶಾಲಾ ಶಿಕ್ಷಕರಿಗೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿ ಮಾಡಬೇಕು.ಅದಕ್ಕೆ ಶಾಶ್ವತ ಮನ್ನಣೆ ನೀಡಬೇಕು.ನವೀಕರಣದ ಷರತ್ತುಗಳನ್ನು ಸಡಿಲಗೊಳಿ ಸಬೇಕು ಎಂದು ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಮಂಜುನಾಥ ಸ್ವಾಮಿ ಮನವಿ ಮಾಡಿದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಫಾಲಾಕ್ಷಿ, ಶ್ರೀನಿವಾಸ್,ದ್ವಾರಕೀಶ್ ನಾಯ್ಕ್, ಎಸ್. ಚಂದ್ರಪ್ಪ, ಹಾಲಪ್ಪ,ರಾಮರೆಡ್ಡಿ,ಪದ್ದಪ್ಪ,ನಿರಂಜನಮೂರ್ತಿ,ಅಂಜಣ್ಣ ಸ್ವಾಮಿ ಇದ್ದರು.