ಬೆಂಗಳೂರಿನಲ್ಲಿ ಮತ್ತೆ ಚಳಿಗಾಳದ ಅಧಿವೇಶನ – ಮತ್ತೆ ಅನಾಥವಾಯಿತು ಸುವರ್ಣ ಸೌಧ

Suddi Sante Desk

ಬೆಳಗಾವಿ –


ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಬೆಳಗಾವಿಯಲ್ಲಿ ನಿರ್ಮಿಸಿದ ಸುವರ್ಣಸೌಧವನ್ನು ಯಾತಕ್ಕಾಗಿ ನಿರ್ಮಾಣ ಮಾಡಿದ್ದಾರೆ‌.ಎಂಬ ಪ್ರಶ್ನೆ ಕಾಡುತ್ತಿದ್ದು ಈಗ ಅನಾಥವಾಗಿ ಎತ್ತರದ ಪ್ರದೇಶದ ಮೇಲೆ ನಿಂತಿದೆ . ಕೋಟಿ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೇ ಈಗ ಈ ಸೌಧವನ್ನು ಸಮಾಧಿ ಮಾಡುವ ನಿರ್ಧಾರ ಕೈಗೊಂಡಂತೆ ಕಾಣುತ್ತಿದೆ.ಈ ಬಾರಿಯೂ ಆದರೂ ಕುಂದಾನಗರಿ ಬೆಳಗಾವಿಯಲ್ಲಿ ಆದರೂ ನಡೆಯುತ್ತದೆ ಎಂದುಕೊಂಡ ಬೆನ್ನಲ್ಲೇ ಈಗ ಚಳಿಗಾಲದ ಅಧಿವೇಶನವನ್ನು ಬೆಂಗಳೂರಲ್ಲೇ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ.


ಚಳಿಗಾಲ ಅಧಿವೇಶನ ಮತ್ತೆ ಬೆಂಗಳೂರಲ್ಲಿಯೇ ನಡೆಸಲು ತೀರ್ಮಾಣ ಮಾಡಿರುವ ಸಿಎಂ ಯಡಿಯೂರಪ್ಪ ಮತ್ತೆ ಬೆಳಗಾವಿಗೆ ಅನ್ಯಾಯ ಮಾಡಿದ್ದಾರೆ,ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸದೇ ಸುವರ್ಣಸೌಧ ಕಡೆಗಣನೆ ಮಾಡುತ್ತಿರುವ ಯಡಿಯೂರಪ್ಪ ತಾವೇ ನಿರ್ಮಿಸಿದ ಸುವರ್ಣ ಸೌಧಕ್ಕೆ ನಿರ್ಲಕ್ಷ್ಯ ಮಾಡುವ ಮೂಲಕ ,ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿದ್ದಾರೆ.


ಅಂದಾಜು 500 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾದ ಸುವರ್ಣಸೌಧ ಕೇವಲ ಶೋ ಪೀಸ್ ಆಗಿದೆ ಆಗುತ್ತಿದೆ ಎಂಬ ಮಾತಿಗೆ ಈಗ ಬೆಳಗಾವಿಯ ಸುವರ್ಣ ಸೌಧ ಸಾಕ್ಷಿಯಾಗಿದೆ.ಉತ್ತರ ಕರ್ನಾಟಕ ಆಶೋತ್ತರಕ್ಕೆ ಸ್ಪಂಧಿಸಲು ನಿರ್ಮಾಣವಾದ ಸುವರ್ಣಸೌಧ ಈಗ ಭೂತ ಬಂಗಲೆ ಆಗಲಿದೆ.
ಉತ್ತರ ಕರ್ನಾಟಕದ ಶಾಸಕರು ಚಳಿಗಾಲ ಅಧಿವೇಶನ ಬೆಳಗಾವಿಯಲ್ಲಿ ನಡೆಸುವ ಕುರಿತು ಪ್ರಶ್ನೆ ಮಾಡದಿರುವುದಕ್ಕೆ ಇಲ್ಲಿಯ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಬಿಜೆಪಿ ಸರ್ಕಾರದಿಂದ ಸುವರ್ಣಸೌಧ ಪದೇ ಪದೇ ನಿರ್ಲಕ್ಷ್ಯ ಕ್ಕೊಳಗಾಗುತ್ತಿದೆ. ಕಳೆದ ಬಾರಿ ಪ್ರವಾಹ ಹಿನ್ನೆಲೆಯಲ್ಲಿ ಅಧಿವೇಶನವನ್ನು ರದ್ದು ಮಾಡಲಾಗಿತ್ತು.ಈಗಲಾದರೂ ಮತ್ತೆ ಬಿಜೆಪಿ ಸರ್ಕಾರ ನಿರ್ಮಾಣ ಮಾಡಿದ ಸೌಧದಲ್ಲಿ ಅಧಿವೇಶನ ಆರಂಭಿಸುವ ಬದಲಿಗೆ ಸರ್ಕಾರ ಈ ಬಾರಿ ಕೊರೊನಾ ನೆಪ ಹೇಳಿ ಚಳಿಗಾಲದ ಅಧಿವೇಶನವನ್ನು ಬೆಂಗಳೂರಲ್ಲೇ ನಡೆಸಲು ತೀರ್ಮಾಣ ಕೈಗೊಂಡಿರುವುದು.ದುರ್ದೈವದ ಸಂಗತಿಯಾಗಿದೆ.ಅಷ್ಟಾಕ್ಕೂ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಬೆಳಗಾವಿಯಲ್ಲಿ ಸುವರ್ಣ ಸೌಧವನ್ನು ಯಾವ ಪುರುಷಾರ್ಥಕ್ಕಾಗಿ ಮಾಡಲಾಗಿದೆ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರ ಉತ್ತರಿಸಬೇಕಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.