ಮೈಸೂರು –
ಆರು ತಿಂಗಳ ಹಿಂದೆ ಮೈಸೂರಿನ ನಂಜನಗೂಡಿನಲ್ಲಿ ನಡೆದಿದ್ದ ಶಿಕ್ಷಕಿ ನಿಗೂಢ ಸಾವಿನ ಪ್ರಕರಣವನ್ನು ನಂಜನ ಗೂಡು ಪೊಲೀಸರು ಕೊನೆಗೂ ಭೇದಿಸಿದ್ದು ನಗರಸಭಾ ಸದಸ್ಯೆ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ನಂಜನ ಗೂಡು 5ನೇ ವಾರ್ಡ್ ನಗರಸಭಾ ಸದಸ್ಯೆ ಗಾಯತ್ರಿ, ಭಾಗ್ಯ,ನಾಗಮ್ಮ ಮತ್ತು ಕುಮಾರ್ ಬಂಧಿತರಾಗಿದ್ದಾರೆ. ಕಳೆದ ಮಾರ್ಚ್ 9 ರಂದು ಶಿಕ್ಷಕಿ ಸುಲೋಚನಾ ಅನುಮಾ ನಸ್ಪಾದವಾಗಿ ಮನೆಯಲ್ಲಿ ಮೃತಪಟ್ಟಿದ್ದರು.ಪ್ರಕರಣ ದಾಖಲಿಸಿಕೊಂಡು ನಿಗೂಢ ಸಾವಿನ ಪ್ರಕರಣ ಬೆನ್ನತ್ತಿದ್ದ ನಂಜನಗೂಡು ಪೊಲೀಸರಿಗೆ ಒಂದು ಮಹತ್ವದ ಸುಳಿವು ದೊರೆಯಿತು.
ಯಾವುದು ಆ ಸುಳಿವು ಅಂದರೆ ಶಿಕ್ಷಕಿ ಸುಲೋಚನಾ ಹಾಗೂ ಗಾಯತ್ರಿ ಪತಿ ಮುರುಗೇಶ್ ನಡುವೆ ಅಕ್ರಮ ಸಂಬಂಧ ಇದ್ದಿದ್ದು.ಮರುಗೇಶ್ ಶ್ರೀಕಂಠೇಶ್ವರ ದೇವಸ್ಥಾನ ದಲ್ಲಿ ಡಿ ಗ್ರೂಪ್ ನೌಕರನಾಗಿದ್ದಾರೆ.ಅಕ್ರಮ ಸಂಬಂಧ ವಿಚಾರವಾಗಿ ಗಾಯತ್ರಿ ಮತ್ತು ಮುರುಗೇಶ್ ನಡುವೆ ಸಾಕಷ್ಟು ಬಾರಿ ಗಲಾಟೆ ನಡೆದಿತ್ತು.ಎಷ್ಟೇ ಗಲಾಟೆ ಮಾಡಿ ಬುದ್ಧಿಮಾತು ಹೇಳಿದರು ಮುರುಗೇಶ್ ಮಾತ್ರ ಸುಲೋ ಚನಾ ಸಹವಾಸವನ್ನು ಬಿಟ್ಟಿರಲಿಲ್ಲ
ಕೊನೆಗೆ ಶಿಕ್ಷಕಿ ಸುಲೋಚನಾ ಕೊಲೆಗೆ ಸಂಚು ರೂಪಿಸಿದ ಗಾಯತ್ರಿ ತನ್ನ ಸಂಬಂಧಿಕರ ಸಹಾಯದೊಂದಿಗೆ ಕೊಲೆ ಮಾಡಿಸಿದ್ದಾಳೆ ಎನ್ನಲಾಗಿದೆ.ಘಟನೆ ನಡೆದು ಆರು ತಿಂಗಳ ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.